Connect with us

    LATEST NEWS

    ಬೆಂಗಳೂರು ಸಂಪೂರ್ಣ ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಾದರ್ ಬೆಂಬಲ

    ಬೆಂಗಳೂರು ಸಂಪೂರ್ಣ ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಾದರ್ ಬೆಂಬಲ

    ಮಂಗಳೂರು ಮಾರ್ಚ್ 18: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಗೆ ಉತ್ತರ ಕರ್ನಾಟಕದಿಂದ ಬರುವ ಬಸ್ ಗಳನ್ನು ತಡೆ ಹಿಡಿಯಬೇಕೆಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

    ಕರೋನಾ ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ದ.ಕ‌ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಸರಕಾರಗಳ ಕ್ರಮಗಳಿಗೆ ಜನ ಸಾಮಾನ್ಯರು ಸಹಕಾರ ನೀಡಬೇಕು, ಜನ ಸ್ವಯಂ ನಿಯಂತ್ರಣ ದಿಂದ ವೈರಸ್ ಗೆ ತುತ್ತಾಗದಂತೆ ನೋಡಿಕೊಳ್ಳಬೇಕು ಹಾಗೂ ಜನರು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಯು.ಟಿ ಖಾದರ್ ಸಲಹೆ ನೀಡಿದ್ದಾರೆ.

    ಅಲ್ಲದೆ ದ.ಕ‌ ಜಿಲ್ಲಾಡಳಿತ ಕೊರೊನಾ ನಿಯಂತ್ರಣ ಕ್ಕೆ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದ್ದು, ಉತ್ತರ ಕರ್ನಾಟಕ ದಿಂದ ದ.ಕ‌ ಜಿಲ್ಲೆಗೆ ಬರುವ ಬಸ್ ಗಳನ್ನು ನಿಲ್ಲಿಸಬೇಕು ,KSRTC ಬಸ್ ಸ್ಟ್ಯಾಂಡ್ ನಲ್ಲಿ ಸ್ಕ್ರೀನಿಂಗ್ ಮಾಡಬೇಕು ಹಾಗೂ ಕೇರಳ ಗಡಿಭಾಗ, ರೈಲ್ವೇ ನಿಲ್ದಾಣ,ಟೋಲ್ ಗೇಟ್ ,ಡೊಮೆಸ್ಟಿಕ್ ಏರ್ ಪೋರ್ಟ್ ನಲ್ಲಿ ಜನರನ್ನು ತಪಾಸಣೆ ಮಾಡಬೇಕು ಎಂದರು.

    ಬೆಂಗಳೂರು ಸಂಪೂರ್ಣ ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಾದರ್ ಸ್ವಾಗತಿಸಿದ್ದಾರೆ. ಜನರು ಸರ್ಕಾರದ ನಿರ್ಧಾರವನ್ನು ಪಾಲಿಸಬೇಕು, ಆದರೆ ದುಡಿಯುವ ವರ್ಗಕ್ಕೆ ಇದರಿಂದ ತೊಂದರೆಯಾಗಬಹುದು, ಸರ್ಕಾರವೂ ಅವರ ಬಗ್ಗೆ ಕಾಳಜಿ ತೋರಬೇಕು ಅಲ್ಲದೆ ಬಾಡಿಗೆ ಮನೆಯಲ್ಲಿದ್ದವರಿಗೆ ಇದರಿಂದ ತೊಂದರೆಯಾಗಬಹುದು, ಬಾಡಿಗೆ ಮನೆ ಮಾಲಿಕರು ಬಾಡಿಗೆಯಲ್ಲಿ ರಿಯಾಯಿತಿ ಕೊಡಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply