LATEST NEWS
ದುಬೈ ಟೂರಿಸ್ಟ್ ವೀಸಾದಲ್ಲಿ ಮಹತ್ತರ ಬದಲಾವಣೆ – ರಿಟರ್ನ್ ಟಿಕೆಟ್ ಹೊಟೇಲ್ ಬುಕ್ಕಿಂಗ್ ಇಲ್ಲದೆ ನೋ ಎಂಟ್ರಿ
ದುಬೈ ನವೆಂಬರ್ 23: ಟೂರಿಸ್ಟ್ ವೀಸಾ ಪಡೆದು ದುಬೈಗೆ ಹೋಗಬಯಸುವ ಪ್ರವಾಸಿಗರಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಸಂಬಂಧ ಅಲ್ಲಿನ ವಲಸೆ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಪ್ರವಾಸಿಗರು ವೀಸಾಗೆ ಅರ್ಜಿ ಸಲ್ಲಿಸುವ ವೇಳೆ ಹೋಟೆಲ್ ಕಾಯ್ದಿರಿಸಿದ ಬಗೆಗಿನ ಮಾಹಿತಿ ಹಾಗೂ ಮರಳುವ ಟಿಕೆಟ್ ಪ್ರತಿ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ.
ಈಗಾಗಲೇ ಪಾಕಿಸ್ತಾನ, ಕೆಲ ಆಫ್ರಿಕನ್ ದೇಶಗಳ ಪ್ರವಾಸಿಗರಿಂದ ನಿಯಮವನ್ನು ಎಲ್ಲರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಅಕ್ರಮವಾಗಿ ದುಬೈಗೆ ವಲಸೆ ಬರುವುದನ್ನು ತಡೆಯಲು ಸರ್ಕಾರ ಈ ನಿಯಮ ಜಾರಿಗೆ ತರುತ್ತಿದೆ. ಈ ಮೊದಲು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಕೇಳಿದರಷ್ಟೇ ಈ ಕಡತಗಳನ್ನು ತೋರಿಸಬೇಕಿತ್ತು. ಆದರೆ ಇದೀಗ 2 ತಿಂಗಳ ವೀಸಾ ಪಡೆಯಬಯಸುವವರ ಕ್ರೆಡಿಟ್ /ಡೆಬಿಟ್ ಕಾರ್ಡ್ ನಲ್ಲಿ ಕನಿಷ್ಠ 5000 ದಿರ್ಹಾಮ್ ಹಾಗೂ 3 ತಿಂಗಳ ವೀಸಾ ಬಯಸುವವರ ಬಳಿ 3000 ದಿರ್ಹಾಮ್ ಇರುವುದು ಕಡ್ಡಾಯವಾಗಿತ್ತು.