Connect with us

    FILM

    ಮಲಯಾಳಂ ಚಿತ್ರೋದ್ಯಮದಲ್ಲಿ ಡ್ರಗ್ಸ್: ಕಾರ್ಯಾಚರಣೆಗೆ ಸಜ್ಜಾದ ಪೊಲೀಸ್ ಕಮಿಷನರ್

    ಕೇರಳ, ಮೇ 17: ಮಲಯಾಳಂ ಚಿತ್ರೋದ್ಯಮದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವತಃ ಕೇರಳ ಪೊಲೀಸ್ ಕಮಿಷನರ್ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರೋದ್ಯಮದ ಹಲವು ಗಣ್ಯರು ಡ್ರಗ್ಸ್ ಹಾವಳಿ ಕುರಿತಾಗಿ ಬಹಿರಂಗವಾಗಿಯೇ ಮಾತನಾಡಿದ್ದರು.

    ಅಲ್ಲದೇ, ಕೆಲ ಚಿತ್ರನಟರು ಡ್ರಗ್ಸ್ ಸೇವಿಸಿ ಸಿನಿಮಾಗಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಪೊಲೀಸ್ ಕಮಿಷನರ್ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ. ಈ ಕುರಿತು ಮಾತನಾಡಿರುವ ಪೊಲೀಸ್ ಕಮಿಷನರ್ ಕೆ.ಸೇತುರಾಮನ್, ‘ಡ್ರಗ್ಸ್ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ಈಗಾಗಲೇ ಪೊಲೀಸರು ತಮ್ಮ ಕೆಲಸವನ್ನು ಶುರು ಮಾಡಿದ್ದಾರೆ. ಸಣ್ಣದೊಂದು ಸುಳಿವು ಸಿಕ್ಕರೆ, ಅವರ ಮೇಲೆ ಅಗತ್ಯ ಕ್ರಮ ತಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

    Addictive substances, including alcohol, cigarettes and drugs.

    ಡ್ರಗ್ಸ್ ಹಾವಳಿ ಕುರಿತು ಚಿತ್ರೋದ್ಯಮದ ಮಲಯಾಳಂ ಚಿತ್ರರಂಗ ಒಕ್ಕೂಟ (ಅಮ್ಮಾ) ಸರಕಾರಕ್ಕೆ ಪತ್ರ ಬರೆದಿತ್ತು. ಅಲ್ಲದೇ, ಅನೇಕ ನಿರ್ಮಾಪಕರು ಒಕ್ಕೂಟಕ್ಕೆ ದೂರು ಕೂಡ ನೀಡಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ಒಕ್ಕೂಟ ಕದತಟ್ಟಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೆ ಮಫ್ತಿಯಲ್ಲಿ ಪೊಲೀಸರು ಬಂದು ಪತ್ತೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply