Connect with us

    FILM

    ಮಾತಲ್ಲೇ ಮನೆಕಟ್ಟಿದ್ದ ಡ್ರೋನ್ ಪ್ರತಾಪ್ ಬಿಗ್ ಬಾಸ್ ನಲ್ಲಿ ಫುಲ್ ಸೈಲೆಂಟ್

    ಬೆಂಗಳೂರು ಅಕ್ಟೋಬರ್ 10: ಕನ್ನಡದ ಬಹು ನಿರೀಕ್ಷೆಯ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಿದೆ. ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು, ಈ ನಡುವೆ ಶಾಸಕ ಪ್ರದೀಪ್ ಈಶ್ವರ್ ಮನೆ ಪ್ರವೇಶಿಸಿ ಸ್ಪರ್ಧೆಯ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿತ್ತು.


    ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಡ್ರೋನ್ ವಿಚಾರಕ್ಕೆ ಸಂಬಂಧಿಸಿದಂತೆ ಸಕತ್ ಟ್ರೋಲ್ ಆಗಿದ್ದ ಡ್ರೋನ್ ಪ್ರತಾಪ್ ಇದ್ದು, ತಾನು ಏನು ಏನೆಂಬುದನ್ನು ತೋರಿಸಲು ಬಿಗ್ ಬಾಸ್ ಗೆ ಬಂದಿದ್ದೇನೆ ಅಂದಿದ್ದ ಡ್ರೋನ್ ಪ್ರತಾಪ್ , ಇದೀಗ ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದು ಎಲ್ಲರಿಗೂ ಶಾಕ್ ನೀಡಿದೆ.


    ಕೇವಲ ಮಾತಿನಿಂದಲೇ ಇಡೀ ಕರ್ನಾಟಕವನ್ನೇ ತಾನು ಡ್ರೋನ್ ವಿಜ್ಞಾನಿ ಎಂದು ನಂಬಿಸಿದ್ದ, ಪ್ರತಾಪ್ ಇದೀಗ ಬಿಗ್ ಬಾಸ್ ಮನೆಯೊಳಗೆ ಏಕಾಂಗಿ, ಮೌನಿಯಾಗಿರುವುದನ್ನು ಕಂಡು ಇತರ ಸ್ಪರ್ಧಿಗಳು ಅಚ್ಚರಿಪಟ್ಟಿದ್ದಾರೆ. ನಿಮಗೆ ತುಂಬಾ ಇಷ್ಟವಾದ ಮತ್ತು ಇಷ್ಟವಲ್ಲದ ಸರ್ಧಿಯ ಹೆಸರು ಹೇಳುವಂತೆ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದಾಗ, ಹೆಚ್ಚಿನ ಸ್ಪರ್ಧಿಗಳು ಪ್ರತಾಪ್‌ ಅವರನ್ನು ಇಷ್ಟವಾಗದ ವ್ಯಕ್ತಿ ಎಂದು ಹೇಳಿದ್ದಾರೆ. ಅದಕ್ಕೆ ಅವರೆಲ್ಲ ನೀಡಿದ ಕಾರಣ ಪ್ರತಾಪ್‌ ಅವರ ಮೌನ. ಸ್ಪರ್ಧಿಗಳ ನಿರ್ಧಾರವನ್ನು ಸಮ್ಮತಿಸಿರುವ ಪ್ರತಾಪ್‌, ಡ್ರೋನ್‌ ವಿಚಾರಕ್ಕೆ ಮಾನಸಿಕವಾಗಿ ಕುಗ್ಗಿದ್ದು, ಇದೆಲ್ಲದರಿಂದ ಹೊರ ಬರಲು ಸಮಯ ಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಬೆರೆಯುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply