Connect with us

FILM

ಡ್ರೋನ್ ಪ್ರತಾಪ್ – ನಿನ್ನ ಮಗನನನ್ನು ಯಾಕೆ ಉಳಿಸಿದ್ದಿಯಾ. ಏನಾದರೂ ಹಾಕಿ ಸಾಯಿಸಿಬಿಡು

ಬೆಂಗಳೂರು ಅಕ್ಟೋಬರ್ 25: ತಾನೇ ಡ್ರೋನ್ ತಯಾರಿಸಿದ್ದೇನೆ ಎಂದು ಹೇಳಿದಲ್ಲದೆ ಯುವ ವಿಜ್ಞಾನಿ ಎಂದು ಜನರನ್ನು ನಂಬಿಸಿ ಪ್ರಖ್ಯಾತಿ ಪಡೆದಿದ್ದ ಡ್ರೋನ್ ಪ್ರತಾಪ್ ಇದೀಗ ಬಿಗ್ ಬಾಸ್ ಮನೆಯಲ್ಲಿದ್ದು, ತಾನು ನಕಲಿ ವಿಜ್ಞಾನಿ ಎಂದು ತಿಳಿದ ಬಳಿಕ ತಾವು ಅನುಭವಿಸಿದ ನೋವನ್ನು ನಟಿ ತಾರಾ ಮುಂದೆ ಹೇಳಿಕೊಂಡಿದ್ದಾರೆ. ತನ್ನ ಮಾತುಗಳಿಂದಲೇ ಇಡೀ ಕರ್ನಾಟಕದ ಜನರನ್ನು ನಂಬಿಸಿ ತಾನೊಬ್ಬ ಡ್ರೋನ್ ವಿಜ್ಞಾನಿ ಎಂದು ಹೇಳಿಕೊಂಡು ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಪಡೆದಿದ್ದ ಡ್ರೋನ್ ಪ್ರತಾಪ್ ಇದೀಗ ಡ್ರೋನ್ ವಿಚಾರದಲ್ಲಿ ತಾವು ಟ್ರೋಲ್ ಆಗುತ್ತಿರುವ ಬಗ್ಗೆ ಈಗ ಕಣ್ಣೀರು ಹಾಕಿದ್ದಾರೆ.


ಹಬ್ಬದ ಪ್ರಯುಕ್ತ ತಾರಾ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಗೆ ಬಂದಿದ್ದರು. ಡ್ರೋನ್ ಪ್ರತಾಪ್ ಅವರನ್ನು ಕರೆದು ಕೂರಿಸಿ ತಾರಾ ಮಾತನಾಡಿದರು. ‘ನಿನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜನರು ನಿನ್ನನ್ನು ಪ್ರೀತಿ ಮಾಡುತ್ತಿದ್ದಾರೆ. ನೀನು ಮಾನಸಿಕವಾಗಿ ಎಷ್ಟು ಟಾರ್ಚರ್ ಅನುಭವಿಸಿದ್ದೀಯಾ ಅನ್ನೋದು ನನಗೆ ಗೊತ್ತು. ನೀನು ತಪ್ಪು ಮಾಡಿರಬಹುದು. ಈಗ ಒಂದು ಅವಕಾಶ ಸಿಕ್ಕಿದೆ. ಅಮ್ಮ ಅಂದ್ಕೊಂಡು ನನ್ನ ಬಳಿ ಹೇಳು’ ಎಂದರು ತಾರಾ.


ಆಗ ಪ್ರತಾಪ್ ಕಣ್ಣಲ್ಲಿ ನೀರು ಬಂತು. ವಾಶ್​ರೂಂ ಹೋಗೋಕೆ ಪ್ರಯತ್ನಿಸಿದರೂ ತಾರಾ ಅವಕಾಶ ಕೊಡಲಿಲ್ಲ. ‘ನಿನಗೇ ಇಷ್ಟು ನೋವಾಗಿದೆ ಎಂದರೆ ಹೆತ್ತವರಿಗೆ ಎಷ್ಟು ನೋವಾಗಿರಬೇಡ ಹೇಳು’ ಎಂದರು ತಾರಾ. ಈ ವೇಳೆ ಪ್ರತಾಪ್ ಅವರು ಮನಸ್ಸಿನ ಮಾತನ್ನು ತೆರೆದಿಟ್ಟರು. ‘ಅವರು ಎಷ್ಟು ನೋವು ಅನುಭವಿಸಿದ್ದಾರೆ ಅನ್ನೋದು ಗೊತ್ತು. ನಿನ್ನ ಮಗನನನ್ನು ಯಾಕೆ ಉಳಿಸಿದ್ದಿಯಾ. ಏನಾದರೂ ಹಾಕಿ ಸಾಯಿಸಿಬಿಡು ಎಂದು ಹೇಳಿದ್ದರು. ನಾನು ದುಡ್ಡು ಮಾಡಿದೀನಿ ಎನ್ನುವ ಆರೋಪ ಇದೆ. ನನ್ನ ಅಮ್ಮ ಮದುವೆ, ಮುಂಜಿಗೆ ಹೋಗಲ್ಲ. ಇದಕ್ಕೆ ನಾನೇ ಕಾರಣ ಎಂದರು. ಈಗ ಊರಲ್ಲಿ ಅವರು ಒಂದು ಮನೆ ಕಟ್ಟಿದ್ದಾರೆ. ಅದರ ಗೃಹ ಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಿಲ್ಲ. ನನ್ನ ಹೆಸರನ್ನು ಎಲ್ಲೂ ಹೇಳಬೇಡಿ ಎಂದೆ. ನನ್ನ ಅಪ್ಪ, ಅಮ್ಮ, ತಂಗಿ ನಂಬರ್ ಬ್ಲಾಕ್ ಮಾಡಿದೀನಿ’ ಎಂದು ಗಳಗಳನೆ ಅತ್ತರು ಪ್ರತಾಪ್.

‘ಮದುವೆ ಆಗಬೇಕಿರೋ ತಂಗಿ ಇದಾಳೆ. ಅದಕ್ಕಾಗಿ ನಾನು ಕಂಪನಿ ಮಾಡಿದೀನಿ. ಕಂಪನಿಯನ್ನು ಬೆಳೆಸಬೇಕಿದೆ. ಡ್ರೋನ್​ ಮಾಡ್ತಾ ಇದೀಯಾ ಅದನ್ನೇ ಮಾಡ್ಕೊಂಡು ಇರು ಬಿಗ್ ಬಾಸ್​ಗೆ ಹೋಗಬೇಡ ಎಂದು ಮಾವನ ಮೂಲಕ ಮನೆಯವರು ಹೇಳಿಸಿದರು. ಆದರೆ, ನಾನು ಕೇಳಲಿಲ್ಲ. ಅಪ್ಪನ ನೋಡಬೇಕು ಎನಿಸುತ್ತಿದೆ’ ಎಂದರು ಪ್ರತಾಪ್.

Share Information
Advertisement
Click to comment

You must be logged in to post a comment Login

Leave a Reply