Connect with us

    FILM

    ಬಿಗ್ ಬಾಸ್ ನಿಂದ ಬರುವ ಒಂದು ರೂಪಾಯಿನೂ ಬೇಡ ಅದನ್ನು ದಾನ ಮಾಡುತ್ತೇನೆ – ಡ್ರೋನ್ ಪ್ರತಾಪ್

    ಬೆಂಗಳೂರು ಜನವರಿ 29 : ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಮುಕ್ತಾಯಗೊಂಡಿದೆ. ಕಾರ್ತಿಕ್‌ ಬಿಗ್ ಬಾಸ್ ಟ್ರೋಫಿಯನ್ನು ಪಡೆದಿದ್ದು ಹಾಗೂ ರನ್ನರ್‌ ಅಪ್‌ ಆಗಿ ಡ್ರೋನ್‌ ಪ್ರತಾಪ್‌ ಹೊರಹೊಮ್ಮಿದ್ದಾರೆ.
    113 ದಿನ ಪ್ರಸಾರ ಕಂಡಿದ್ದ ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ ಬಾಸ್‌ ಸೀಸನ್‌ 10 ಫಿನಾಲೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ.


    ಇನ್ನು ಫಿನಾಲೆ ಫಲಿತಾಂಶ ಅನೌನ್ಸ್‌ ಆಗುವ ಮುನ್ನ ಪ್ರತಾಪ್‌ ವೇದಿಕೆಯಲ್ಲಿ “ನಾನು ಕಾರ್ಯಕ್ರಮಕ್ಕೆ ಬರುವಾಗ ಹೇಳಿದ್ದೆ, ಒಂದು ವೇಳೆ ನಾನು ಬಿಗ್ ಬಾಸ್ ಗೆದ್ದರೆ, ಟ್ರೋಫಿ ಮಾತ್ರ ನಾನು ಇಟ್ಟುಕೊಳ್ಳುತ್ತೇನೆ ಅದರಿಂದ ಬರುವ ಒಂದು ರೂಪಾಯಿಯೂ ನನಗೆ ಬೇಡ. ಅದನ್ನು ಯಾವುದೋ ಆಶ್ರಮಕ್ಕೆ ಅಥವಾ ಬಡವರಿಗೆ ದಾನ ಮಾಡುತ್ತೇನೆ ಎಂದಿದ್ದೆ. ಇವತ್ತಿಗೂ ಆ ಮಾತಿಗೆ ಬದ್ಧನಾಗಿರುತ್ತೇನೆ. ನಾನು ಗೆದ್ದರೆ ಟ್ರೋಫಿ ಮಾತ್ರ ನನಗೆ ಸಾಕು” ಎಂದರು.


    ಇನ್ನು ಬೌನ್ಸ್ ಸಂಸ್ಥೆ ಕಡೆಯಿಂದ ಇಬ್ಬರಿಗೂ ಎಲೆಕ್ಟ್ರಿಕ್ ಸ್ಕೂಟರ್ ಬಹುಮಾನವಿತ್ತು. ಇದರ ಬಗ್ಗೆ ಮಾತನಾಡಿದ ಅವರು, ” ಇಲ್ಲಿ ನೀಡುವ ಸ್ಕೂಟರ್ ನ್ನು ನಾನು ಫುಡ್ ಡೆಲಿವರಿ ಮಾಡಲು ಕಷ್ಟ ಪಡುವ ಬಡವರಿಗೆ ನೀಡುತ್ತೇನೆ” ಎಂದು ಹೇಳಿದ್ದಾರೆ.
    ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆದ ಅವರಿಗೆ 10 ಲಕ್ಷ ನಗದು ಬಹುಮಾನ ಸಿಕ್ಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply