LATEST NEWS
ಕಟೀಲು ದೇವಳದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಚಿಂತನೆ
ಮಂಗಳೂರು ಅಕ್ಟೋಬರ್ 05: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಭಾನುವಾರ ಬ್ಯಾನರ್ ಆಳವಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಭಕ್ತರು ಅಶ್ಲೀಲ ರೀತಿಯ ಬಟ್ಟೆ ಹಾಕಿ ದೇವಸ್ಥಾನಕ್ಕೆ ಆಗಮಿಸುತ್ತಿರುವುದು ಹೆಚ್ಚಾಗಿದ್ದು, ಈ ಹಿನ್ನಲೆ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯ ಹೇರಿದ್ದವು. ಅಲ್ಲದೆ ಇತ್ತೀಚೆಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಬ್ಯಾನರ್ ಆಳವಡಿಸಲಾಗಿತ್ತು, ಇದೀಗ ಕಟೀಲಿನಲ್ಲಿ ಇದೇ ರೀತಿ ಬ್ಯಾನರ್ ಆಳವಡಿಸಲಾಗಿದೆ.
ಈ ಬ್ಯಾನರ್ ನಲ್ಲಿ ಹಿಂದೂ ಸಂಪ್ರದಾಯಿಕ ಬಟ್ಟೆಯನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ದೇವಾಲಯದ ವತಿಯಿಂದ ವಿನಂತಿಸಲಾಗಿದೆ. ಆದರೆ ಸದ್ಯ ಯಾವುದೇ ಬಟ್ಟೆ ತೊಟ್ಟು ಬಂದರೂ ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ ಇಲ್ಲ. ಆದರೆ ವಸ್ತ್ರ ಸಂಹಿತೆಯನ್ನು ಹಂತ ಹಂತವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ.