Connect with us

    LATEST NEWS

    ಮುಳುಗುವ ಹಂತದಲ್ಲಿ ಮತ್ತೊಂದು ಡ್ರೆಜ್ಜರ್‌, 15 ಕಾರ್ಮಿಕರ ರಕ್ಷಣೆ

    ಮುಳುಗುವ ಹಂತದಲ್ಲಿ ಮತ್ತೊಂದು ಡ್ರೆಜ್ಜರ್‌, 15 ಕಾರ್ಮಿಕರ ರಕ್ಷಣೆ

    ಮಂಗಳೂರು ಅಕ್ಟೋಬರ್ 29: ಅರಬ್ಬಿ ಸಮುದ್ರದಲ್ಲಿ ಕ್ಯಾರ್ ಚಂಡಮಾರುತ ಹಿನ್ನಲೆಯಲ್ಲಿ ಉಂಟಾದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿದ ಡ್ರೆಜ್ಜಿಂಗ್ ಹಡಗೊಂದು ಮುಳುಗುವ ಹಂತದಲ್ಲಿದ್ದು ಅದರಲ್ಲಿದ್ದ ಎಲ್ಲಾ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

    ನವಮಂಗಳೂರು ಬಂದರಿನಲ್ಲಿ ಹೂಳು ತೆಗೆಯಲು ಬಂದಿದ್ದ ಮುಂಬಯಿ ಮೂಲದ ಮರ್ಕೆಟರ್‌ ಸಂಸ್ಥೆಯ ಡ್ರೆಜ್ಜರ್‌ ಭಗವತಿ ಪ್ರೇಮ್‌ನ ಚುಕ್ಕಾಣಿ ತುಂಡಾಗಿ ಸಮುದ್ರದ ಪ್ರಕ್ಷುಬ್ಧತೆಗೆ ಮರಳಿನಲ್ಲಿ ಹೂತು ಹೋಗಿದ್ದು ಸುರತ್ಕಲ್ ಸಮೀಪದ ಗುಡ್ಡೆ ಕೊಪ್ಲದಿಂದ ಅನಾತಿ ದೂರದಲ್ಲಿ ಬಂದು ನಿಂತಿದೆ.

    ಡ್ರೆಜ್ಜೆಂಗ್ ಕಾರ್ಯಾಚರಣೆಯಲ್ಲಿದ್ದ ಭಗವತಿ ಪ್ರೇಮ್ ಹೆಸರಿನ ಈ ಡ್ರಜ್ಜರ್ ನಿನ್ನೆ ಸಂಜೆ ಪ್ರತಿಕೂಲ ಹವಮಾನದಿಂದ ಸಮುದ್ರ ತೀರದಿಂದ 5 ಕಿಲೋ ಮೀಟರ್‌ ದೂರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುವ ಹಂತದಲ್ಲಿತ್ತು. 15 ಕಾರ್ಮಿಕರು ಈ ಹಡಗಿನಲ್ಲಿದ್ದರು ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನವಮಂಗಳೂರು ಬಂದರಿನ ನಾಲ್ಕು ಟಗ್‌ಗಳ ನೆರವಿನಿಂದ ಮುಳುಗುತ್ತಿದ್ದ ಡ್ರಜ್ಜರನ್ನು ಕಾರ್ಯಾಚರಣೆ ನಡೆಸಿ ಅದರಲ್ಲಿದ್ದ ಎಲ್ಲಾ 15 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು.

    ಈ ನಡುವೆ ಡ್ರೆಜರ್‌ ನಲ್ಲಿದ್ದ ತೈಲ ಕೂಡ ಸೋರಿಕೆಯಾಗುತ್ತಿದ್ದು, ಸಮುದ್ರಕ್ಕೆ ಸೇರುತ್ತಿದೆ ಇದರಿಂದ ಸ್ಥಳಿಯ ಮೀನುಗಾರರು ಅತಂಕದಲ್ಲಿದ್ದಾರೆ. ಈ ಹಿಂದೆ ಇದೇ ಸಂಸ್ಥೆಯ ಡ್ರೆಜ್ಜರ್ ಒಂದು ಮುಳುಗಡೆಯಾಗಿತ್ತು. ಈಗ ಮತ್ತೊಂದು ಮುಳುಗುಲ ಹಂತಕ್ಕೆ ಬಂದಿದ್ದು, ಇದು ಮುಳುಗಡೆಯಾದರೇ ಮೀನುಗಾರಿಕೆಗೆ ತೊಂದರೆಯಾಗುವ ಸಾಧ್ಯತೆ ಇದ್ದು, ಕೂಡಲೇ ಇದನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply