LATEST NEWS
ದೈವಾರಾಧನೆ ಅವಹೇಳನಮಾಡಿದ ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ದೈವಾರಾಧನೆ ಅವಹೇಳನಮಾಡಿದ ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು
ಮಂಗಳೂರು ಅ.29:ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ದೈವಾರಾಧನೆ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನು ಉತ್ತರಕನ್ನಡ ಜಿಲ್ಲಯ ಸಿದ್ದಾಪುರದ ಮುದ್ದುರಾಜ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ತನ್ನ ಫೇಸ್ ಬಕ್ ಪೇಜ್ ಟ್ರೋಲ್ ಹೂ ಟ್ರೋಲ್ ಕನ್ನಡಿಗ ಇದರಲ್ಲಿ ತುಳುನಾಡಿನ ದೈವಾರಾಧನೆ ಹಾಗೂ ಇತರ ಪವಿತ್ರ ಅರಾಧನೆಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮತ್ತು ಕಮೆಂಟ್ ಹಾಕಿದ್ದ, ಈ ಕುರಿತಂತೆ ಅರ್ನಾಲ್ಡ್ ತುಳುವೆ ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದ ಕುರಿತಂತೆ ಕಾರ್ಯಾಚರಣೆಗೆ ಇಳಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಸಿದ್ದಾಪುರದ ಅವರಗುಪ್ತಾ ಎಂಬಲ್ಲಿ ಬಂಧಿಸಿದ್ದಾರೆ. ಈ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲಿಸ್ ಆಯುಕ್ತರಾದ ಡಾ, ಪಿ.ಎಸ್. ಹರ್ಷ ಸಮುದಾಯಗಳ ನಡುವೆ ದ್ವೇಷವನ್ನು ಹರಡಿಸುವವರಿಗೆ ಇದೊಂದು ಕಠಿಣ ಎಚ್ಚರಿಕೆಯ ಸಂದೇಶವಾಗಿದೆ. ಯಾರು ಕೂಡ ಸಮುದಾಯಗಳ ನಡುವೆ ದ್ವೇಷ ಹರಡಿಸುವ ದುಸ್ಸಾಸಕ್ಕೆ ಕೈ ಹಾಕಬಾರದು. ಇಂಥದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.