Connect with us

LATEST NEWS

ಟ್ವೀಟರ್ ವಾರ್ ಗೆ ಕಾರಣವಾದ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೋಪೂಜೆ

ಟ್ವೀಟರ್ ವಾರ್ ಗೆ ಕಾರಣವಾದ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೋಪೂಜೆ

ಉಡುಪಿ ಅಕ್ಟೋಬರ್ 29: ಕಾಂಗ್ರೇಸ್ ಮುಖಂಡ ಮಾಜಿ ಸಚಿವರೊಬ್ಬರ ಗೋಪೂಜೆ ಈಗ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಹಲವಾರು ವರ್ಷಗಳಿಂದ ತಮ್ಮ ಮನೆಯಲ್ಲಿ ಸಾಕಿರುವ ಗೋವುಗಳಿಗೆ ಪೂಜೆಯನ್ನು ಮಾಡುತ್ತಿರುವ ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಾರಿಯೂ ಗೋಪೂಜೆ ನಡೆಸಿ ಅದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು.

ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಮಾಡಿರೋ ಗೋಪೂಜೆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಪ್ರಮೋದ್ ಮಧ್ವರಾಜ್ ಅವರ ಟ್ವೀಟ್ ಗೆ ವೀರೇಶ್ ಎನ್ನುವ ವ್ಯಕ್ತಿ ಪಾರ್ಲಿಮೆಂಟ್ ನಲ್ಲಿ ಗೋಹತ್ಯೆಗೆ ಬೆಂಬಲಿಸುವವರು ಗೋಪೂಜೆ ನಡೆಸ್ತಾರೆ‌. ನಿಜವಾಗಿ‌ ಕಾಂಗ್ರೆಸ್ ಪಕ್ಷದ ಉದ್ದೇಶವೇನು. ನಿಮ್ಮ ಹೃದಯವನ್ನ ಮುಟ್ಟಿ ನೀವು ಮಾಡುವುದು ಸರಿಯೇ ಎಂಬ ಪ್ರಶ್ನೆಯನ್ನ ಮಧ್ಚರಾಜರಿಗೆ ನೇರವಾಗಿ ಕೇಳಿದ್ದಾರೆ.

ಇದಕ್ಕೆ ಪ್ರಮೋದ್ ಮಧ್ವರಾಜ್ ಕೂಡ ಖಡಕ್ಕಾಗಿ ಪ್ರತಿಕ್ರೀಯಿಸಿದ್ದಾರೆ. ನಿಮ್ಮ ಬಾಸ್ ಗೆ ಕೇಳಿ ಮೊದಲು ಗೋರಫ್ತು ನಿಲ್ಲಿಸಿ ಮತ್ತೆ ಗೋಪ್ರೇಮ ತೋರಿಸಿ ಪ್ರತಿ ಟ್ವೀಟ್ ಮಾಡಿದ್ದಾರೆ. ಹೀಗೆ ಗೋಹತ್ಯೆ, ಗೋ ಪ್ರೇಮ ವಿಚಾರದಲ್ಲಿ ಟ್ವೀಟ್ ವಾರ್ ಮೂಲಕ ರಾಜಕೀಯ ಸಮರ ನಡೆಯುತ್ತಿದ್ದೆ.

ಈ ನಡುವೆ ಉಡುಪಿಯ ಉಪ್ಪೂರಿನಲ್ಲಿರುವ ನಿವಾಸದಲ್ಲಿ ಸುಮಾರು 50 ಗೋವುಗಳನ್ನ ಸಾಕಿ ಪೂಜಿಸಿಕೊಂಡು ಬರುತ್ತಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಗೋಪ್ರೇಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.