FILM
ತೆರೆಗೆ ಬರಲಿದೆ ಮಾಜಿ ಡಾನ್ ಅಮರ್ ಆಳ್ವ ಜೀವನ ಕಥಾನಕ
ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ
ಬೆಂಗಳೂರು, ಜೂನ್ 2 : 28 ವರ್ಷಗಳ ಹಿಂದೆ ಮಂಗಳೂರು ಭೂಗತ ಜಗತ್ತನ್ನು ಆಳಿದ್ದ ಅಮರ್ ಆಳ್ವ ಜೀವನ ಆಧರಿತ ಚಲನಚಿತ್ರ ತೆರೆಗೆ ಬರಲಿದ್ದು, ಕರಾವಳಿ ಮೂಲದ ನಿರ್ದೇಶಕ ಕಂ ನಟ ರಿಷಬ್ ಶೆಟ್ಟಿ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗ್ಲೇ ಲಾಕ್ ಡೌನ್ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಮತ್ತು ಅವರ ಜೊತೆ ಈ ಹಿಂದೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಿತೇಶ್, ಅಮರ್ ಆಳ್ವ ಕುರಿತ ಚಿತ್ರದ ಕಥೆಗೆ ಸ್ಕ್ರಿಪ್ಟ್ ರಚನೆಯಲ್ಲಿ ತೊಡಗಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರದಲ್ಲಿ ಮಾಜಿ ಡಾನ್ ಆಗಿ ಸ್ವತಃ ರಿಷಬ್ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ.
ಮಂಗಳೂರಿನಲ್ಲಿ ನೆಲೆಸಿದ್ದ ಅಮರ್ ಆಳ್ವ ಮುಂಬೈ ಭೂಗತ ಜಗತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 1992ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಕಾಲೇಜು ಬಳಿ ಭೂಗತ ಜಗತ್ತಿನ ವ್ಯಕ್ತಿಗಳಿಂದಲೇ ಗುಂಡೇಟು ಪಡೆದು ಹತರಾಗಿದ್ದರು. ಆದರೆ, ಅಮರ್ ಆಳ್ವ ಕೆಲಸದ ಬಗ್ಗೆ ಈಗಲೂ ಮಂಗಳೂರು ಮತ್ತು ಮುಂಬೈನಲ್ಲಿ ಉತ್ತಮ ಅಭಿಪ್ರಾಯ ಹೊಂದಿರುವವರು ಬಹಳಷ್ಟಿದ್ದಾರೆ. ತುಂಬ ಡೈನಾಮಿಕ್ ವ್ಯಕ್ತಿಯಾಗಿದ್ದ ಅಮರ್ ಆಳ್ವ, ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ, ಶರದ್ ಶೆಟ್ಟಿ, ಮುತ್ತಪ್ಪ ರೈ ಜೊತೆ ನಿಕಟ ಸಂಪರ್ಕದಲ್ಲಿದ್ದರು. ಇಂಥ ವ್ಯಕ್ತಿಯ ಜೀವನಾಧರಿತ ಚಿತ್ರವೊಂದು ಈಗ ತಯಾರಾಗುತ್ತಿದ್ದು 2021ರ ವೇಳೆಗೆ ಸೆಟ್ಟೇರಲಿದೆ.
ಸದ್ಯಕ್ಕೆ ರಿಷಬ್ ಶೆಟ್ಟಿ ಬೆಲ್ ಬಾಟಂ 2, ರುದ್ರಪ್ರಯಾಗ, ಹರಿಕಥೆ ಅಲ್ಲ ಗಿರಿಕಥೆ ಚಿದ್ರದ ಶೂಟಿಂಗಲ್ಲಿ ಬಿಝಿಯಾಗಿದ್ದಾರೆ. ಕಾಸರಗೋಡು ಸರಕಾರಿ ಶಾಲೆ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಿತೇಶ್, ಅಮರ್ ಆಳ್ವ ಚಿತ್ರದಲ್ಲಿ ನಿರ್ದೇಶಕನಾಗಿ ಭಡ್ತಿ ಪಡೆಯುವ ಸನ್ನಾಹದಲ್ಲಿದ್ದಾರೆ.
You must be logged in to post a comment Login