LATEST NEWS
ಚಾಲಾಕಿ ನಾಯಿಕಳ್ಳ..ಸಿಸಿಟಿವಿ ಸೆರೆಯಾದ ಕಳ್ಳನ ಕೈಚಳಕ
ಉಡುಪಿ ಜನವರಿ 5: ವೈದ್ಯರೊಬ್ಬರ ಮನೆಯ ಸಾಕು ನಾಯಿಯನ್ನು ಕಳ್ಳನೊಬ್ಬ ಕದ್ದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಡಾಕ್ಟರ್ ಸುರೇಂದ್ರ ಶೆಟ್ಟಿ ಎಂಬವರ ಬನ್ನಂಜೆಯ ಮನೆಯಲ್ಲಿ ಬೆಳಗಿನ ಜಾವ ನಈ ಕಳ್ಳತನ ನಡೆದಿದೆ. ಮುಂಜಾನೆ 4.35 ರ ಸುಮಾರಿಗೆ ಎಲ್ಲರೂ ಮಲಗಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಮನೆಯ ಹಿಂಬದಿಯಿಂದ ಒಳಗೆ ನುಗ್ಗಿದ ಕಳ್ಳನು, ಬೆಕ್ಕಿನ ಹೆಜ್ಜೆ ಇಟ್ಟು ಬಂದು, ನಾಯಿಯನ್ನು ಕದ್ದುಕೊಂಡು ಹೋಗಿದ್ದಾನೆ.
ವಿಶಿಷ್ಟ ಹೈಬ್ರಿಡ್ ತಳಿಯ ನಾಯಿ ಮನೆಯವರ ಅಪಾರ ಪ್ರೀತಿಗೆ ಪಾತ್ರವಾಗಿತ್ತು. ಬೆಳಗ್ಗೆದ್ದಾಗ, ನಾಯಿಯನ್ನು ಕಾಣದೆ ಮನೆಯವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಅಲ್ಲಿ ಕಳ್ಳನ ಕರಾಮತ್ತು ಪತ್ತೆಯಾಗಿದೆ. ಕಳ್ಳ ನಡು ವಯಸ್ಕನಾಗುದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ನಾಯಿ ಕದ್ದ ಕಳ್ಳನನ್ನು ಹುಡುಕಿಕೊಡಿ ಎಂಬ ಮೆಸೇಜ್ ಉಡುಪಿ ಯಾದ್ಯಂತ ಹರಿದಾಡುತ್ತಿದೆ. ನಾಯಿ ಒಂಚೂರು ಬೊಗಳದಂತೆ ಮೋಡಿ ಮಾಡಿರುವ ಕಳ್ಳನ ಚಾಕಚಕ್ಯತೆ ಕಂಡು ಜನ ಬೆರಗಾಗಿದ್ದಾರೆ.