Connect with us

DAKSHINA KANNADA

ಒಎಲ್ಎಕ್ಸ್​ನಲ್ಲಿ ಸೊತ್ತು ಮಾರಲು ಹೋದ ವ್ಯಕ್ತಿಗೆ 16 ಸಾವಿರ ಪಂಗನಾಮ!

ಮಂಗಳೂರು, ಜನವರಿ 05: ಒಎಲ್ಎಕ್ಸ್​​ನಲ್ಲಿ ವಸ್ತುವನ್ನು ಖರೀದಿ ಮಾಡಿರುವುದರಿಂದ ತೊಡಗಿ ಅಗತ್ಯ ವಿಲ್ಲದ ವಸ್ತುವನ್ನು ಮಾರಾಟ ಮಾಡುವ ತನಕ ಹೆಸರುವಾಸಿಯಾದ ಜಾಲತಾಣ, ಆದರೆ ಇಲ್ಲೊಬ್ಬ ವ್ಯಕ್ತಿ ಒಎಲ್ಎಕ್ಸ್​​ನಲ್ಲಿ ಸೊತ್ತು ಮಾರಾಟ ಮಾಡಲು ಹೋಗಿ  16 ಸಾವಿರ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.

ಒಎಲ್ಎಕ್ಸ್​ನಲ್ಲಿ 4 ಸಾವಿರ ರೂ.ಗೆ ತಮ್ಮ ಸೊತ್ತು ಮಾರಾಟ ಮಾಡಲು ಜಾಹೀರಾತು ಹಾಕಿದ್ದರು. ಈ ಜಾಹೀರಾತು ನೋಡಿ ರವಿವಾರ ಶ್ರೀಕಾಂತ್ ಎಂಬಾತ ಕರೆ ಮಾಡಿ, ಆ ಸೊತ್ತು ತನಗೆ ಬೇಕು ಎಂದಿದ್ದ. ಅಲ್ಲದೆ ತಾನು ಕಳುಹಿಸಿರುವ ಕ್ಯೂಆರ್ ಕೋಡ್​ನನ್ನು ಸ್ಕ್ಯಾನ್ ಮಾಡಲು ತಿಳಿಸಿದ್ದಾನೆ.

ಫಿರ್ಯಾದಿದಾರರು ಶ್ರೀಕಾಂತ್ ಎಂಬಾತ ಹೇಳಿದಂತೆ ಕ್ಯೂಆರ್ ಕೋಡ್​ ಮೂರು ಬಾರಿ ಸ್ಕ್ಯಾನ್ ಮಾಡಿದ್ದಾರೆ‌. ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 16 ಸಾವಿರ ರೂ. ಕಟ್ ಆಗಿದೆ. ಆಗ ಅವರಿಗೆ ತಾವು ಮೋಸ ಹೋಗಿರೋದು ತಿಳಿದು ಬಂದಿದೆ. ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Facebook Comments

comments