Connect with us

LATEST NEWS

ಕೇರಳ – ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಅಪಘಾತದ ದೃಶ್ಯ

ಕೇರಳ : ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯ ಜೊತೆ ಪಾದಾಚಾರಿಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಒಂದು ದ್ರಶ್ಯ ಕೇರಳದಲ್ಲಿ ನಡೆದಿದ್ದು,ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯರ ಮೇಲೆ ಯಮರೂಪಿ ಕಾರೊಂದು ಹರಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…  ಈ ಮಹಿಳೆಯರು ಬಸ್ ಗಾಗಿ ರಸ್ತೆಯ ಬದಿಯಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದ್ದು, ಮತ್ತೊಂದು ಮಹಿಳೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭ ಕಾರೊಂದು ಅತೀ ವೇಗದಲ್ಲಿ ಬಂದು ನಡೆದುಕೊಂಡು ಬರುತ್ತಿದ್ದ ಮಹಿಳೆ ಹಾಗೂ ಬಸ್ ಗೆ ಕಾಯುತ್ತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ರಭಸಕ್ಕೆ ಇಬ್ಬರು ಮಹಿಳೆಯರು ಸಾವನಪ್ಪಿದ್ದು, ಓರ್ವ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.


ಮನುಷ್ಯನಿಗೆ ಸಾವು ಯಾವ ರೀತಿಯಾಗಿ ಬರುತ್ತದೆ ಎಂಬುದಕ್ಕೆ ಈ ದ್ರಶ್ಯ ಒಂದೆಡೆಯಾದರೆ, ದೈವ ಬಲವಿದ್ದರೆ ಯಮ ಕಣ್ಣ ಮುಂದೆ ಬಂದ್ರು ಕೂಡಾ ಏನು ಆಗದೆ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕೂಡಾ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ

Facebook Comments

comments