BANTWAL
ಸಿದ್ದರಾಮಯ್ಯ ಅವರ ಹೇಳಿಕೆ ವೈಯುಕ್ತಿಕ.. ಪಕ್ಷಕ್ಕೆ ಸಂಬಂಧವಿಲ್ಲ – ಡಿಕೆಶಿ

ಬಂಟ್ವಾಳ ಜನವರಿ 6: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೋಹತ್ಯೆ ಕುರಿತಾದ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯವಾಗಿದ್ದು, ಇದರಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಪಾಣೆಮಂಗಳೂರಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮೈಸೂರು ವಿಭಾಗೀಯ ಮಟ್ಟದ ಪ್ರತಿನಿಧಿ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಅಗತ್ಯವಿರಲಿಲ್ಲ ಅದನ್ನು ಕೇವಲ ರಾಜಕಾರಣ ಉದ್ದೇಶದಿಂದ ಜಾರಿ ಮಾಡಿದ್ದಾರೆ . ಗೋವನ್ನು ಪೂಜಿಸುವ ಪದ್ಧತಿ ಮೊದಲಿನಿಂದಲೂ ಇದೆ ಎಂದು ಹೇಳಿದರು.

ಎಲ್ಲಾ ವರ್ಗದ ಮಂದಿಯೂ ಹೈನುಗಾರಿಕೆ ಮಾಡುತ್ತಾರೆ. ಅವರೆಲ್ಲರಿಗೂ ಸರಕಾರ 25 ರಿಂದ 50 ಸಾವಿರ ರೂ. ಪರಿಹಾರ ನೀಡಲಿ ಎಂದು ಅವರು ಆಗ್ರಹಿಸಿದ್ದು, ಬಳಿಕ ಅವರ ಮನೆಗೆ ಬೇಕಾದರೂ ಕರೆದೊಯ್ಯಲಿ ಎಂದು ವ್ಯಂಗ್ಯವಾಡಿದರು.