ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕೈ ಮುಖಂಡನ ಅಕ್ರಮ ಮರಳುಗಾರಿಕೆ ದಂಧೆ ಹಿಂದೆ ಉಸ್ತುವಾರಿ ಸಚಿವರ ಕೈವಾಡ ?

ಬೆಳ್ತಂಗಡಿ,ಎಪ್ರಿಲ್ 29: ಕಾಂಗ್ರೆಸ್ ನಾಯಕ ಯುಟಿ ಖಾದರ್ ರ ಪ್ರಭಾವ ಬಳಸಿ ಸ್ಥಳೀಯ ಕೈ ಮುಖಂಡನೊಬ್ಬ ಅಕ್ರಮ ಮರಳುಗಾರಿಕೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

ಧರ್ಮಸ್ಥಳ ದ ನೇತ್ರಾವತಿ ನದಿಯಲ್ಲಿ ಈ ಅಕ್ರಮ ನಡೆಯುತ್ತಿದ್ದು,ಸ್ಥಳೀಯ ಕಾಂಗ್ರೆಸ್ ಮುಖಂಡ ಮಹೇಶ್ ಆಚಾರಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ.

ಮರಳುಗಾರಿಕೆ ನಡೆಯುತ್ತಿರುವ ಸ್ಥಳದ ಪಕ್ಕದಲ್ಲೇ HP ಗ್ಯಾಸ್ ಲೈನ್ ಹಾದು ಹೋಗಿದ್ದು,ಮರಳುಗಾರಿಕೆ ಯಿಂದ ಗ್ಯಾಸ್ ಲೈನ್ ಗೆ ತೊಂದರೆ ಯಾಗಿರೋ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ‌.

ಧರ್ಮಸ್ಥಳ ಗ್ರಾಮ ಪಂಚಾಯತ್ ಪಿಡಿಒ ಉಮೇಶ್ ರನ್ನು ಕೈ ಮುಖಂಡರು ಕೈಗೊಂಬೆಯನ್ನಾಗಿ ಮಾಡಿದ್ದು,ಅಧಿಕಾರಿಗಳ ಸಮ್ಮುಖದಲ್ಲೇ ಅಕ್ರಮ ನಡೆಯುತ್ತಿರೋದು ಬೆಳಕಿಗೆ ಬಂದಿದೆ.

ಸುಮಾರು 20 ಎಕರೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು,ಪ್ರಶ್ನೆ ಎತ್ತಿದವರಿಗೆ ಜೀವಬೆದರಿಕೆ ಒಡ್ಡುತ್ತಿದ್ದಾರೆ.

ಉಸ್ತುವಾರಿ ಸಚಿವರ ಆಪ್ತರ ಈ ಅಕ್ರಮ ನದಿಗೆ ಮಾರಕವಾಗಿದ್ದು,ಅಕ್ರಮ ಗಳನ್ನು ತಡೆಯಬೇಕಾದ ಅಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪವೂ ವ್ಯಕ್ತವಾಗಿದೆ.