ಯುವ ಬ್ರೀಗೇಡ್ ನಿಂದ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟದ ಸ್ವಚ್ಛತೆ, ಭಾರೀ ಪ್ರಮಾಣ ತ್ಯಾಜ್ಯಗಳ ವಿಲೇವಾರಿ

ಪುತ್ತೂರು,ಎಪ್ರಿಲ್ 29: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವಕ ತಂಡ ಸ್ವಚ್ಛತಾ ಕಾರ್ಯ ಮಾಡಿದೆ.

ಕುಮಾರಧಾರ ನದಿಯ ದರ್ಪಣ ತೀರ್ಥದಲ್ಲಿ ಯುವಕರು ಸ್ವಚ್ಫತಾ ಕಾರ್ಯ ಮಾಡಿದ್ದು ಈ ವೇಳೆ ಯುವಕರ ತಂಡ‌ ಬೆಚ್ಚಿ ಬಿದ್ದಿದೆ‌.

ಕುಮಾರಧಾರಾ ನದಿಯಲ್ಲಿ 20ಕ್ಕೂ ಹೆಚ್ಚು ಟ್ರಾಕ್ಟರುಗಳಷ್ಟು ತ್ಯಾಜ್ಯವನ್ನು ಹೊರತೆಗೆಯಲಾಗಿದೆ.

ಕನಿಷ್ಠ 10,000 ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ನದಿಯಿಂದ ಎತ್ತಲಾಗಿದೆ.

ಇವುಗಳಲ್ಲಿ 3000ಕ್ಕೂ ಹೆಚ್ಚು ಹೆಂಡದ ಬಾಟಲಿಗಳೇ ಇವೆ..ಸುಬ್ರಹ್ಮಣ್ಯ ಕ್ಷೇತ್ರ ಪರಿಸರದಲ್ಲಿ ಮದ್ಯಪಾನ ಮಾರಾಟ ನಿಷೇಧವಾಗಿದ್ರೂ ಯಾತ್ರಾರ್ಥಿಗಳು ಮೋಜಿಗಾಗಿ ಕ್ಷೇತ್ರಕ್ಕೆ ಬಂದು ಕುಡಿದು ಬಾಟಲಿಗಳನ್ನು ಎಸೆದಿರೋದು ದುರಾದೃಷ್ಟಕರವಾಗಿದೆ.

12 ಕೋಟಿ ವೆಚ್ಚದಲ್ಲಿ ನದಿ ಶುದ್ಧೀಕರಣ ಘಟಕ ಮಾಡಿದ್ರೂ ಕೆಲಸ‌ ಮಾಡುತ್ತಿಲ್ಲ.

ಭಕ್ತರು ತೀರ್ಥವೆಂದು ಕುಮಾರಧಾರ ದ ಚರಂಡಿ ನೀರಿನಲ್ಲೇ ಸ್ನಾನ ಮಾಡುತ್ತಿದ್ದಾರೆ.

ಸ್ಥಳೀಯ ವಸತಿಗೃಹ,ಲಾಡ್ಜ್ ಗಳ ಕಲುಷಿತ ನೀರು ಕುಮಾರಧಾರೆಯನ್ನು ಸೇರುತ್ತಿದ್ದು,ನದಿ ನೀರು ಅಕ್ಷರಶ ವಿಷವಾಗುತ್ತಿದೆ.