FILM
ಡ್ಯಾನ್ಸ್ ಒಂದರ ಚಿತ್ರೀಕರಣದಲ್ಲಿ ನನ್ನ ‘ಪ್ಯಾಂಟಿ’ ತೋರಿಸುವಂತೆ ಕೇಳಿಕೊಂಡಿದ್ದ ನಿರ್ದೇಶಕ: ಪ್ರಿಯಾಂಕಾ ಚೋಪ್ರಾ ಆರೋಪ

ವಾಷಿಂಗ್ಟನ್, ಮಾರ್ಚ್ 21: ಸಿನೆಮಾ ಚಿತ್ರೀಕರಣದ ವೇಳೆ ಹಲವು ನಟಿಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವುದನ್ನು ಸ್ವತಃ ಅವರ ಬಾಯಿಯಿಂದಲೇ ನಾವು ಕೇಳುತ್ತಿರುತ್ತೇವೆ. ಇಂತಹದೇ ಒಂದು ಆಘಾತಕಾರಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು.
ಹೌದು, ಅವರು ತಾವು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಆರಂಭದ ದಿನಗಳಲ್ಲಿ ಅನುಭವಿಸಿದ ದೌರ್ಜನ್ಯವನ್ನು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಖ್ಯಾತ ಟಾಕ್ ಷೋ ನಿರೂಪಕಿ ಓಪ್ರಾ ವಿನ್ ಪ್ರೆ ಅವರು ನಡೆಸಿದ ಸಂದರ್ಶನದಲ್ಲಿ ಪ್ರಿಯಾಂಕಾ ಅವರು ತಮಗಾದ ನೋವನ್ನು ಹೇಳಿಕೊಂಡಿದ್ದಾರೆ.

ತಾವು ಆಗತಾನೇ ಬಾಲಿವುಡ್ಗೆ ಪ್ರವೇಶ ಮಾಡಿದ್ದೆ. ನೃತ್ಯವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಕಡಿಮೆ ಉಡುಪುಗಳನ್ನು ಹಾಕಿ ಚಿತ್ರಿಕರಣ ಮಾಡುತ್ತಿದ್ದರು. ಅದು ಅಸಹ್ಯಕರವಾಗಿರಲಿಲ್ಲ. ಆದರೆ, ನಿರ್ದೇಶಕರು ಒಂದು ಹೆಜ್ಜೆ ಮುಂದೆ ಹೋಗಿ ನನಗೆ ನೃತ್ಯದಲ್ಲಿ ನಾನು ಧರಿಸಿದ್ದ ಪ್ಯಾಂಟಿಯನ್ನು (ಒಳ ಉಡುಪು) ಕಾಣಿಸುವಂತೆ ಹೇಳಿದರು.
ಇದರಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೆ. ಮಾರನೇ ದಿನ ನಾನು ಆ ಸಿನಿಮಾ ಚಿತ್ರೀಕರಣಕ್ಕೆ ಹೋಗಲಿಲ್ಲ. ಇದೊಂದು ನನಗಾಗ ಕೆಟ್ಟ ಅನುಭವ. ನನ್ನ ಪಾಲಕರು ನನಗೆ ದೈರ್ಯ ತುಂಬಿ ನನ್ನ ಜೊತೆ ಇದ್ದರು ಎಂದು ಪ್ರಿಯಾಂಕಾ ಹೇಳಿದ್ದಾರೆ. ಆದರೆ ಪ್ರಿಯಾಂಕ ಅವರು ತಮಗೆ ಕಿರುಕುಳ ನೀಡಿದ ನಿರ್ದೇಶಕನ ಹೆಸರನ್ನು ಸಂದರ್ಶನದಲ್ಲಿ ಬಹಿರಂಗ ಮಾಡಿಲ್ಲ.