Connect with us

    DAKSHINA KANNADA

    ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗುಚಿ ಬಿದ್ದ ಟ್ಯಾಂಕರ್ -ಡಿಸೇಲ್ ತುಂಬಿಸಲು ನೂಕು ನುಗ್ಗಲು

    ಪುತ್ತೂರು ಮಾರ್ಚ್ 13: ಡಿಸೇಲ್ ತುಂಬಿದ್ದ ಟ್ಯಾಂಕರ್ ವೊಂದು ರಾಷ್ಟ್ರೀಯ ಹೆದ್ದಾರಿ 75 ರ ಉಪ್ಪಿನಂಗಡಿ ಸಮೀಪ ನೆಕ್ಕಿಲಾಡಿ ಎಂಬಲ್ಲಿ ಮುಗುಚಿ ಬಿದ್ದಿರುವ ಘಟನೆ ನಡೆದಿದೆ.


    ಈ ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ತೆರಳುತ್ತಿದ್ದ ಟ್ಯಾಂಕರ್ ಬೊಳ್ಳಾರ ಬಳಿ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದ್ದು, ಬಿದ್ದ ಪರಿಣಾಮ ಟ್ಯಾಂಕರ್ ನಿಂದ ಡಿಸೇಲ್ ಸೋರಿಕೆಯಾಗಿದೆ.

    ಈ ಹಿನ್ನಲೆ ಸ್ಥಳೀಯರು ಮತ್ತು ವಾಹನ ಚಾಲಕರು ಸೋರಿಕೆಯಾಗುತ್ತಿದ್ದ ಡಿಸೇಲ್ ನ್ನು ತುಂಬಿಸಲು ಆರಂಭಿಸಿದ್ದು, ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಸ್ಥಳಕ್ಕೆ ಉಪ್ಪಿನಂಗಡಿ ಪೋಲೀಸರು ಸ್ಥಳಕ್ಕೆ ಭೇಟಿ ಜನರನ್ನು ಚದುರಿಸಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply