Connect with us

LATEST NEWS

ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಸಂಪೂರ್ಣ ನಾಟಕ ನೋಡಿ ಕಲಾವಿದರನ್ನು ಅಭಿನಂದಿಸಿದ ಶಾಸಕ ಸುನಿಲ್ ನಾಯಕ

ಭಟ್ಕಳ ಮಾರ್ಚ್ 13: ಸಾಮಾನ್ಯವಾಗಿ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬರೋದೇ ತಡವಾಗಿ. ಒಂದು ವೇಳೆ ಬಂದ್ರೂ ಅವರ ಭಾಷಣ ಮುಗಿದ ತಕ್ಷಣ ಜಾಗ ಖಾಲಿ. ಆದರೆ ಶಾಸಕರೊಬ್ಬರು ತನ್ನ ಮನೆಯವರೊಂದಿಗೆ ಕೂತು ಮಧ್ಯರಾತ್ರಿಯವರೆಗೆ ಪೂರ್ತಿ ನಾಟಕ ನೋಡಿದ್ದಾರೆ. ಅವರು ಬೇರ್ಯಾರೂ ಅಲ್ಲ ಭಟ್ಕಳ ಶಾಸಕ ಸುನಿಲ್ ನಾಯಕ.

ಯುವಕರ ಮೇಲೆ ಅಪಾರ ಕಾಳಜಿ ಪ್ರೀತಿ ಹೊಂದಿರುವ ಶಾಸಕ ಶಿರಾಲಿಯ ಪುಟ್ಟ ಹಳ್ಳಿಯ ಹರಿಕಂಠ ಶಂಭುಲಿಂಗೇಶ್ವರ ದೇವರ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಧ್ಯಮವರ್ಗದ ಜನರೇ ತುಂಬಿರುವ ಆ ಪ್ರದೇಶದ ಜನರೊಡನೆ ಅತ್ಯಂತ ಪ್ರೀತಿಯಿಂದ ಬೆರೆತ ಶಾಸಕರು ಸಭಾ ಕಾರ್ಯಕ್ರಮವನ್ನು ಬೇಗನೆ ಮುಗಿಸಿ ನಾಟಕ ಆರಂಭಕ್ಕೆ ಅನುವು ಮಾಡಿಕೊಟ್ಟರು.

ಉಡುಪಿಯ ಅಭಿನಯಾ ತಂಡದ ನೂರು ಪ್ರದರ್ಶನ ಕಂಡ ದೇಶ ಭಕ್ತಿ ಕಥಾನಕದ ಬಂದೇ ಬರ್ತಾನೆ ನಾಟಕವನ್ನು ಪೂರ್ತಿಯಾಗಿ ನೋಡಿ ಖುಷಿಪಟ್ಟರು. ಶಾಸಕರು ಇಡೀ ನಾಟಕದಲ್ಲಿ ಉಪಸ್ಥಿತರಿದ್ದುದು ಕಲಾವಿದರಿಗೆ ಆಶ್ಚರ್ಯ ಮತ್ತು ಹರ್ಷ ಎರಡೂ ಉಂಟಾಗಿತ್ತು.

ನಾಟಕ ಮುಗಿದಾಗ ರಾತ್ರಿ ೨ ಗಂಟೆಯಾಗಿತ್ತು. ಶಾಸಕರು ಕಲಾವಿದರನ್ನು ಅಭಿನಂದಿಸಿದರು. ಶಾಸಕರ ಈ ಕಲಾ ಪ್ರೋತ್ಸಾಹಕ್ಕೆ ಕಲಾವಿದರು ಬೆರಗಾಗಿದ್ದರು.