Connect with us

KARNATAKA

ಶಿರಸಿಯಲ್ಲಿ ಡಿಸೇಲ್ ಬೆಲೆ ಲೀಟರ್ ಗೆ 100 ರೂಪಾಯಿ

ಉತ್ತರಕನ್ನಡ : ಕರ್ನಾಟಕದಲ್ಲಿ ಡಿಸೇಲ್ ಬೆಲೆ 100ಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ನಂತರ ಡಿಸೇಲ್ ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಶಿರಸಿಯಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಶನಿವಾರ ಲೀಟರ್ ಡೀಸೆಲ್ ದರ ₹100.12ಕ್ಕೆ ಏರಿಕೆಯಾಗಿದ್ದು, ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

ಶುಕ್ರವಾರ ಪ್ರತಿ ಲೀಟರ್ ದರ ₹97.35 ಪೈಸೆ ಇತ್ತು. ಒಂದೇ ದಿನಕ್ಕೆ ಅದು 37 ಪೈಸೆಯಷ್ಟು ಹೆಚ್ಚಳವಾಗಿದೆ. ಡೀಸೆಲ್ ದರ ಏರಿಕೆಯಾಗಿರುವದು ಸರಕು ವಾಹನಗಳ ಮಾಲೀಕರಿಗೆ ಚಿಂತೆ ತಂದಿದೆ.

ಪೆಟ್ರೋಲ್ ದರ ಕೂಡ ₹109.71ಕ್ಕೆ ಏರಿಕೆಯಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 30 ಪೈಸೆಯಷ್ಟು ಹೆಚ್ಚಳವಾಗಿದೆ. ಪ್ರತಿದಿನ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಸರಾಸರಿ ಮೂವತ್ತು ಪೈಸೆ ಹೆಚ್ಚಳವಾಗುತ್ತಿದೆ. ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಆಗುತ್ತಿದೆ. ಸಾಗಾಣಿಕೆ ವೆಚ್ಚ ಹೆಚ್ಚಳವಾಗುವ ಕಾರಣ ದರ ಉಳಿದ ಕಡೆಗಿಂತ ಹೆಚ್ಚಿದೆ’ ಎಂದು ಪೆಟ್ರೋಲ್ ಬಂಕ್ ಒಂದರ ಮಾಲೀಕರು ಪ್ರತಿಕ್ರಿಯಿಸಿದ್ದಾರೆ