LATEST NEWS
ದಿನಕ್ಕೊಂದು ಕಥೆ- ಹೆಸರೇನಿಡಲಿ

ಹೆಸರೇನಿಡಲಿ
ಹೆಸರೇನಿಡಲಿ ಗೊತ್ತಾಗುತ್ತಿಲ್ಲ. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಹೆಸರಿದೆ. ನಾವಿಟ್ಟದ್ದೋ, ಇನ್ಯಾರು ಇಟ್ಟದ್ದೋ. ಒಟ್ಟಿನಲ್ಲಿ ಹೆಸರೊಂದಿದೆ.ನನಗ್ ಉಂಟಾಗುತ್ತಿರುವ ಅದೊಂದು ಭಾವಕ್ಕೆ ಏನೆಂದು ಹೆಸರಿಡಲಿ ಗೊತ್ತಾಗ್ತಾಯಿಲ್ಲ. ಅದಯ ಗೌರವ ಅಲ್ಲ, ಭಕ್ತಿಯ ಪರಾಕಾಷ್ಟೆಯಲ್ಲ, ಪ್ರೀತಿಯ ಬಾಂಧವ್ಯ ಅಲ್ಲ, ಸಹೋದರತೆಯಲ್ಲ, ಜೊತೆಗಾರ ಎನ್ನುವ ನ ಪಟ್ಟವು ಅಲ್ಲ.
ಪ್ರಾಥಮಿಕ ಶಾಲೆಯಲ್ಲಿ ನನ್ನ ತರಗತಿಯಲ್ಲಿದ್ದ ಅವಳ ಕೈಗಳು ತುಂಬಾ ಮುದ್ದಾಗಿದ್ದವು, ನನ್ನ ವಿಜ್ಞಾನ ಟೀಚರ್ ಕಣ್ಣುಗಳು ಆಕರ್ಷಿಸಿದ್ದವು, ನನ್ನ ಪ್ರೌಢಶಾಲೆಯಲ್ಲಿ ಸಮಾಜ ಮೇಷ್ಟ್ರ ಸ್ವರ ಎದೆಯೊಳಗೆ ಸಣ್ಣ ಕಂಪನವನ್ನು ಮೂಡಿಸಿತ್ತು, ಕಾಲೇಜು ನಾಟಕ ಮೇಷ್ಟ್ರ ಗುಣ ಮನಸ್ಸನ್ನು ಆವರಿಸಿತ್ತು ,ಗೆಳೆಯನೊಬ್ಬನ ಸ್ಪರ್ಶ ಆಪ್ತವಾಗಿತ್ತು, ಗೆಳತಿಯ ನಗು ಹುಚ್ಚು ಹಿಡಿಸಿತ್ತು, ಒಬ್ಬನ ಬರಹ ಕೌತುಕ ಹುಟ್ಟಿಸಿತ್ತು.

ವಿದ್ಯಾರ್ಥಿಯೊಬ್ಬನ ನೇರನುಡಿ ಒಪ್ಪಿಗೆಯಾಗಿತ್ತು, ವಿದ್ಯಾರ್ಥಿನಿಯೊಬ್ಬಳ ನಡವಳಿಕೆ ಗೌರವ ಹೆಚ್ಚಿಸಿತ್ತು .ಇದೊಂದು ನಿಲ್ಲದ ಪ್ರಕ್ರಿಯೆ. ಇವರ್ಯಾರನ್ನು ಅವರಿಗೆ ಮೊದಲು ಹೇಳಿರುವ ಹೆಸರಿನಲ್ಲಿ ಕರೆಯೋಕೆ ಇಷ್ಟವಿಲ್ಲ. ಅವರು ಬೇರೆಯದೇ ಆದ ಒಂದು ಭಾವ. ನನ್ನೊಂದಿಗೆ ಅನುದಿನ ಇರಬೇಕು ಅವರು. ಆದರೆ ಯಾವುದೇ ಭಾವದೊಳಗೆ ಬಂಧಿಯಾಗದೆ. ಹೆಸರಿಲ್ಲದ ಬಾಂಧವ್ಯ ಗಟ್ಟಿಯಾಗಿ ಉಳಿದು ಬಿಡಬೇಕು.
ಇದೊಂಥರಾ ಮಾವಿನಹಣ್ಣಿನ ಸ್ವಾದವನ್ನು ವಿವರಿಸಿದಂತೆ ಪದಕ್ಕೆ ಸಿಗದಂತಹ ಭಾವ. ಏನೆಂದು ಹೆಸರಿಡಲಿ. ಭಾವಗಳಿಗೆ ಹೆಸರಿನ ಅವಶ್ಯಕತೆ ಏನಾದರೂ ಇದೆಯಾ…? ಗೊತ್ತಿಲ್ಲ
ಉತ್ತರದ ನಿರೀಕ್ಷೆಯಲ್ಲಿ ನಾನು …
ಧೀರಜ್ ಬೆಳ್ಳಾರೆ