Connect with us

FILM

ಪಡ್ಡೆಹುಡುಗರ ನಿದ್ದೆಗೆಡಿಸಿದ ಬಾಲಿವುಡ್ ನಟಿ ನೋರಾ ಫತೇಹಿ ಕಟೌಟ್ ಡ್ರೆಸ್

ಮುಂಬೈ : ಬಾಲಿವುಡ್ ನಟಿ ನೋರಾ ಫತೇಹಿ ತಮ್ಮ ವಿನೂತನ ಡ್ರೆಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಬಿಳಿ ಬಣ್ಣದ ಕಟೌಟ್​ ಡ್ರೆಸ್​ ಧರಿಸಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹಾಟ್​ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನೋರಾ ಫತೇಹಿ ತಮ್ಮನೃತ್ಯ ಶೈಲಿ ಹಾಗೂ ಡ್ಯಾನ್ಸ್ ವೀಡಿಯೋಗಳಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಅದರ ಜೊತೆಗೆ ತಮ್ಮಔಟ್‍ಫಿಟ್ ಹಾಗೂ ಫ್ಯಾಷನ್ ಆಯ್ಕೆಯಿಂದಲೂ ಆಗಾಗ ಸದ್ದು ಮಾಡುತ್ತಿರುತ್ತಾರೆ.


ನೋರಾ ಅವರು ತೊಟ್ಟಿದ್ದ ಡ್ರೆಸ್​ನಿಂದಾಗಿ ಕೊಂಚ ಮುಜುಗರಕ್ಕೆ ಒಳಗಾದ ಹಾಗೆ ಕಾಣಿಸಿದ್ದಾರೆ. ನೋರಾ ಅವರ ಆ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಇಂತಹ ಡ್ರೆಸ್​ಗಳನ್ನು ತೊಡುವುದ್ಯಾಕೆ, ಮುಜಗರಕ್ಕೆ ಒಳಗಾಗುವುದು ಏಕೆ ಅಂತ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.


ಫ್ಯಾಷನ್​ ಡಿಸೈನರ್​ಗಳು ಮಾಡುವ ವಿನ್ಯಾಸಿತ ವಸ್ತ್ರಗಳಿಗೆ ತಮ್ಮ ಸೊಗಸು ಹಾಗೂ ಆಕರ್ಷಕ ಮೈಮಾಟದಿಂದ ಜೀವ ತುಂಬುತ್ತಾರೆ. ಅಂತೆಯೇ ಇಂತಹ ಡ್ರೆಸ್​ಗಳಲ್ಲಿ ನಟಿಯರನ್ನು ನೋಡಿದವರ ನಿದ್ದೆ ಹಾಳಾಗೋದಂತೂ ಗ್ಯಾರಂಟಿ.