LATEST NEWS
ದಿನಕ್ಕೊಂದು ಕಥೆ- ಕಾಡಳುತ್ತಿದೆ
ಕಾಡಳುತ್ತಿದೆ
ಕಾಡಳುತಿದೆ?. ರೋದನೆಯ ಕಂಪನ ನಾಡಿನ ವಿವೇಚಕರ ಕಿವಿಯೊಳಗೆ ಕೇಳಿಸದಿರುವುದು ವಿಪರ್ಯಾಸ .ತನ್ನನ್ನ ತಾನು ಉಳಿಸಿಕೊಳ್ಳಲಾಗದೆ ಇರೋದಕ್ಕೆ ವ್ಯಥೆ ಪಡುತ್ತಿದೆ. ತನಗೆ ಚಲಿಸಕ್ಕಾಗದೇ ಇರೋದು ಈಗ ಶಾಪವೆಂದೆನಿಸಿದೆ. “ಮನುಷ್ಯ ಮೃಗ”ಗಳನ್ನು ತೊರೆದು ದೂರ ಚಲಿಸಬೇಕೆಂದು ಯೋಚಿಸುತ್ತಿದೆ .ನಾವು ಇಷ್ಟು ದಿನ ಗಾಳಿ ,ನೀರು ,ಕೊಟ್ಟು ಸಾಕಿದ್ದು ಇವರನ್ನಾ?. ಛೇ! ಕರುಣೆಯಾ ಕೊಂಡಿಯೇ ಕಳಚಿ ಹೋಗಿದಿಯಾ?, ನನ್ನೊಳಗೆ ಉಳಿದಿದ್ದ “ಅವನನ್ನ “ಸಾಯಿಸೋಕೆ ಅನುಮತಿ ನೀಡಿದವರು ಯಾರು?
ನೀವೇನು ಮಾಡಿದ್ದರೂ ಹಿಡಿದು ಜೈಲೊಳಗೆ ತಳ್ಳುತ್ತೀರಾ. ಹೀಗೆ ಎಷ್ಟು ಕಳೆದುಕೊಂಡಿದ್ದೆವೋ ಏನೋ?. ಹೊಸ ಸುದ್ಧಿಗಳೆಲ್ಲಾ ಮೊಬೈಲ್ ಒಳಗಡೆಯಿಂದ ಹಾದು ಮನಸ್ಸು ಪ್ರವೇಶಿಸುವುದಕ್ಕೇನೋ ಅದಕ್ಕೆ ವೈರಸ್ ಅಟ್ಯಾಕ್ ಆಗಿಬಿಟ್ಟಿರುತ್ತೆ.. ನಿಮಗದು ಕಾಡೋದೆ ಇಲ್ಲಾಲ್ವಾ. ಥೂ ನಿಮ್ಮ ಜನ್ಮಕ್ಕೆ!.
ಶಿಕ್ಷಣ ಯಾಕೆ ಪಡೆದುಕೊಂಡ್ರಿ. ನೀವು ಆದಿಮಾನವರಾಗಿಯೇ ಇರಬೇಕಿತ್ತು. ಯೋಚನೆ ಅಭಿವ್ಯಕ್ತಿ, ಪ್ರಗತಿ ಹೊಂದಿದಂತೆ ನಾವು ಮರೆಯಾಗುತ್ತಿದ್ದೇವೆ?. ಒಂದು ದಿನ ಬರುತ್ತೆ ಉಸಿರಾಡಲು ಗಾಳಿ ಸಿಗದೇ ದೇಹ ಬಿಗಿಗೊಂಡ ನಾ ಹೇಳೋದು ಒಂದೇ ಮಾತು …….
ಕಾಡು ಘೋಷಿಸಿತು ತನ್ನ ಸಹಚರರಿಗೆ “ಒಂದು ದಿನ ಉಪವಾಸ ಇರೋಣ , ಅವರ ಬಂಧುಗಳ ಒಕ್ಕೊರಲಿನ ಮಾತುಗಳು ವೇದನೆಯಿಂದ ಹೊರಬಂದವು.
ಧೀರಜ್ ಬೆಳ್ಳಾರೆ