LATEST NEWS
ದಿನಕ್ಕೊಂದು ಕಥೆ- ರೆಕ್ಕೆ
ರೆಕ್ಕೆ
ಗಾಳಿಯೊಂದಿಗೆ ವ್ಯವಹರಿಸುತ್ತಾ ರೆಕ್ಕೆಬಿಚ್ಚಿ ಬಾನಗಲ ಓಡಾಡುತ್ತಿದ್ದ ಹಕ್ಕಿ ನಿಯಂತ್ರಣ ತಪ್ಪಿ ನೆಲಕ್ಕುರುಳಿತು .ಹಾರುವುದು ಒಂದೇ ಸತ್ಯದ ಬಾಳಲಿ .ತಟ್ಟನೆ ನೆಲಕ್ಕುರುಳಿತು. ರೇಕ್ಕೆಯೊಂದು ತುಂಡಾಗಿ ಗಾಳಿಯೊಂದಿಗೆ ಸೇರಿ ಎಲ್ಲೋ ಕಳೆದು ಹೋಗಿತ್ತು .ಒಂಟಿ ರೆಕ್ಕೆಯಲ್ಲಿ ಪ್ರಯತ್ನ ಮುಂದುವರಿದರೂ ನೋವು ಹೆಚ್ಚಾಗುತ್ತಿದೆ. ವಿನ ಗೆಲುವಲ್ಲ. ಭುಜದ ನೋವು ತೀವ್ರವಾಗುತ್ತಾ ಹೋಗುತ್ತಿದೆ.
ಒಂದು ವಾರದ ಹಿಂದೆ ಗಾಳಿಯೊಂದಿಗಿನ ವೇಗಕ್ಕೆ ತನ್ನ ವೇಗವನ್ನು ಒಡ್ಡಿಕೊಳ್ಳಬೇಕಾಗಿದ. ಎರಡು ರೇಕ್ಕೆಗಿಂತ ಒಂದೇ ರೆಕ್ಕೆ ಇದ್ದರೆ ಭಾರ ಕಡಿಮೆಯಾಗಿ ಹೆಚ್ಚುದೂರ ಹಾರುಬಹದು ಎನ್ನುವ ಯೋಚನೆ ಮೂಡಿದ್ದಂತೂ ಸತ್ಯ ಆದರೆ ಆ ಮಾತು ಕೃತಿ ಹೇಳಿದಾಗ ಮಾತ್ರ ಆದರೆ ನೋವಿನ ಕಣ್ಣೀರು ಕಾಣಲಾರಂಭಿಸಿತು.
ಈಗ ನನಗೆ ಅರ್ಥವಾಯಿತು ಬರಿಯ ಆತ್ಮವಿಶ್ವಾಸವಲ್ಲ ಪ್ರಯತ್ನವು ಬೇಕು, ಸೃಜನಶೀಲತೆಗೆ ಪರಿಶ್ರಮ ಹೀಗೆ, ಎಲ್ಲಾ ಸೇರುತ್ತ ಹೋದಹಾಗೆ ಸಾಧನೆಯ ಗೂಡಿಗೆ ತಲುಪಬಹುದು. ರೆಕ್ಕೆಗಳ ಅವಶ್ಯಕ ಇದೆ ಅಲ್ವಾ ಖಂಡಿತಾ ಅಲ್ವಾ?
ಧೀರಜ್ ಬೆಳ್ಳಾರೆ