Connect with us

DAKSHINA KANNADA

ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ದಿನಿ – ಶ್ರೀದೇವಿಗೆ ಅಷ್ಟಬಂಧಕ್ರಿಯೆ, ಸಹಸ್ರ ಬ್ರಹ್ಮ ಕಲಾಶಾಭಿಷೇಕ

ಪುತ್ತೂರು ಡಿಸೆಂಬರ್ 26: ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ದಿನಿ ದೇಗುಲದಲ್ಲಿ ಇಂದು ಬೆಳಿಗ್ಗೆ ಶ್ರೀದೇವಿಗೆ ಅಷ್ಟಬಂಧಕ್ರಿಯೆ, ಸಹಸ್ರ ಬ್ರಹ್ಮ ಕಲಾಶಾಭಿಷೇಕ ನಡೆಯಿತು.


ಇಂದು ಬೆಳಿಗ್ಗೆ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಪರಿಕಲಶಾಭಿಷೇಕ ನಡೆಯಿತು. ಬಳಿಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತ್ರತ್ವದಲ್ಲಿ ಬೆಳಿಗ್ಗೆ 10.10ರಿಂದ 10.45ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನಿ ದೇವಿಗೆ ಅಷ್ಟಬಂಧ ಕ್ರಿಯೆ, ಸಹಸ್ರ ಬ್ರಹ್ಮಕಲಶಾಭಿಷೇಕ ನಡೆಯಿತು. ನಂತರ ಉತ್ಸವ ಮೂರ್ತಿಯ ಪ್ರತಿಷ್ಟಾಪನೆ ನಡೆಯಿತು


ಈ ಸಂದರ್ಭ ಮಾಜಿ ಕೇಂದ್ರ ಸಚಿವ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರು ಆಗಿರುವ ಡಿ.ವಿ. ಸದಾನಂದ ಗೌಡ, ಅವರ ಪತ್ನಿ ಡಾಟಿ ಸದಾನಂದ ಗೌಡ, ಮತ್ತೊರ್ವ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಮೈಸೂರಿನ ಖ್ಯಾತ ಉದ್ಯಮಿ ಸುಬ್ರಹ್ಮಣ್ಯ ರೈ ಕೆ.ಎಸ್‌ , ಸಮಿತಿಯ ಅಧ್ಯಕ್ಷರಾದ ಅಶೋಕ್‌ ಕುಮಾರ್ ರೈ ಕೆ. ಎಸ್, ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಕೋಡಿಂಬಾಡಿ, ಕೇಶವ ಭಂಡಾರಿ ಕೈಪಮನೆ, ಪ್ರಚಾರ ಸಮಿತಿ ಸಂಚಾಲಕ ಜಯಪ್ರಕಾಶ್‌ ಬದಿನಾರು ಹಾಗೂ ನೂರಾರು ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ದೇವಳದ ಕೆಳಭಾಗದ ಅನ್ನ ಛತ್ರದಲ್ಲಿ ಅನ್ನ ದಾಸೋಹ ನಡೆಯಿತು. ಸಂಜೆ ಕಲಶತೀರ್ಥ ಸಂಪ್ರೋಕ್ಷಣೆ , ವೈದಿಕ ಮಂತ್ರಾಕ್ಷತೆ ಹಾಗೂ ಶ್ರೀ ದೇವಿಗೆ ಲಕ್ಷ ಕುಂಕುಮಾರ್ಚನೆ ಸೇವೆ ನಡೆಯಿತು. ಇದೇ ವೇಳೆ ದೇವಳದ ಮುಂಭಾಗದಲ್ಲಿರುವ ಅಮ್ಮ ವೇದಿಕೆಯಲ್ಲಿ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಿದ್ದವು.

Advertisement
Click to comment

You must be logged in to post a comment Login

Leave a Reply