LATEST NEWS
ದಿನಕ್ಕೊಂದು ಕಥೆ – ಅವಸರ
ಅವಸರ
ಅಲ್ಲಿಯ ಬಾಗಿಲು ಮುಚ್ಚಲಾಗಿದೆ .ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿರ ತಿಳಿಯುವ ಸುಗಂಧಭರಿತ ತಾಣ .
ಅಲ್ಲಿ ಸುಖಿಸುತ್ತಿರುವ ಹಲವು ಚೇತನಗಳಿವೆ .ಹಾಗೆಯೇ ಹೊರಗೆ ದುಃಖಿಸುತ್ತಿರುವ ಮನಸ್ಸುಗಳೂ ಇವೆ. ದ್ವಾರಪಾಲಕರಿಗೆ ನೇರವಾಗಿ ಆದೇಶವಾಗಿದೆ “ಕಪ್ಪುಪಟ್ಟಿ ಧರಿಸಿ ಬರೋರನ್ನ ಒಳ ಬಿಡಬೇಡಿ”. ಆ ಪಟ್ಟಿಯನ್ನು ಯಾರೂ ಆಂಟಿಸಿದ್ದಲ್ಲ .ಬೇಡ ಎಂದು ಕಿತ್ತುಹಾಕೋಕು ಬರುವುದಿಲ್ಲ .
ಸುಂದರ ಭೂಮಿಯಲ್ಲಿ ಬದುಕನ್ನು ತೊರೆದು, ಎದುರಿಸಲಾಗದೇ, ಆತ್ಮವನ್ನು ಬೇರ್ಪಡಿಸಿ ಹೊರಟವರಿಗೆ ಕಪ್ಪುಪಟ್ಟಿ ತಾನಾಗಿಯೇ ಅಂಟುತ್ತದೆ .ಗುರಿಗೆ, ಸಾಧನೆಗೆ ಅವಸರವನ್ನು ಒಪ್ಪಬಹುದು ಸಾವಿಗೇಕೆ ಅವಸರ. ಸತ್ತು ಸಾಧಿಸುವುದೇನು ?.ಬದುಕಿ ತೋರಿಸಲಾಗದೆ ಹೇಡಿ ಮರಣವ ಬೆಂಬಲಿಸುವವರಾರಿಲ್ಲ .
ಭಗವಂತ ಮುತುವರ್ಜಿಯಿಂದ ಸಮಯ ಕೊಟ್ಟು ಬದುಕ ನೀಡಿ ರೂಪಿಸಿ ನಮ್ಮ ಕಳಿಸಿರುವಾಗ ಭೂಮಿಗೆ ,ಅವ ನಮ್ಮೊಳಗೆ ಸ್ಥಾಯಿಯಾಗಿರುವ . ಜೀವವನ್ನ ತೊರೆದು ಓಡಿಸುವ ಇರಾದೆ ಏಕೋ ಗೊತ್ತಿಲ್ಲ ? ಆ ಬಾಗಿಲೊಳಗೆ ದೇವ ದುಃಖಿಸಿದ್ದಾನೆ.
ಭೂಮಿಗೆ ಕಳುಹಿಸಿದ ಕಾರಣವ ತೊರೆದು ಬಂದಾಗ ಒಳ ಸೇರಿಸದೇ ಹೊರಗಿಟ್ಟಿದ್ದಾನೆ. ಅವನೊಳಗೆ ಸಾಗಲು ಕಾಲ ಬರಲಿ ,ಅವನೇ ಕರೆಯಲಿ ,ಕರೆ ಬರದೇ ನಾವೇ ಸೃಷ್ಟಿಸಿದರೆ ಹೊರಗಡೆ ಕಾಯುತ್ತಲೇ ಇರಬೇಕಾಗುತ್ತದೆ.