BANTWAL
ಬಂಟ್ವಾಳ: ಹಾನಿಕಾರಕ ಹೇಳಿಕೆಗೆ ಮಾನನಷ್ಟ ದಾವೆ- ನ್ಯಾಯಾಲಯದ ತಡೆಯಾಜ್ಞೆ ..!

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿ, ಹೂಡಿದ್ದ ಮಾನನಷ್ಟ ದಾವೆಯನ್ನು ಪುರಸ್ಕರಿಸಿದ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯ ಯಾವುದೇ ಮಾನಹಾನಿ ಹೇಳಿಕೆಗಳನ್ನು ಪ್ರಕಟಿಸಿದಂತೆ, ತಡೆಯಾಜ್ಞೆ ನೀಡಿದೆ.
ಬಂಟ್ವಾಳ: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿ, ಹೂಡಿದ್ದ ಮಾನನಷ್ಟ ದಾವೆಯನ್ನು ಪುರಸ್ಕರಿಸಿದ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯ ಯಾವುದೇ ಮಾನಹಾನಿ ಹೇಳಿಕೆಗಳನ್ನು ಪ್ರಕಟಿಸಿದಂತೆ, ತಡೆಯಾಜ್ಞೆ ನೀಡಿದೆ.

ಬಂಟ್ವಾಳ ತಾಲೂಕು ಪ್ರೆಸ್ ಕ್ಲಬ್ ಅಧ್ಯಕ್ಷ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ನಮ್ಮ ಬಂಟ್ವಾಳ ಟಿ.ವಿ.ಚಾನೆಲ್ ಮಾಲಕ ಪ್ರಶಾಂತ್ ಎಂ.ಅವರು ತಮ್ಮ ವಿರುದ್ಧ, ಪದ್ಮನಾಭ ಸಾವಂತ ಎಂಬವನು ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಹೇಳಿಕೆಗಳನ್ನು ನೀಡುತ್ತಿದ್ದಾರೆ,ಎಂದು ಆರೋಪಿಸಿ, ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಅವರ ದೂರಿನಂತೆ ನ್ಯಾಯಾಲಯವು,ಸಾಮಾಜಿಕ ಜಾಲತಾಣಗಳು,ಎಲೆಕ್ಟ್ರಾನಿಕ್ ಮಾಧ್ಯಮಗಳು,ಪತ್ರಿಕೆ,ಟಿ.ವಿ.ಮಾಧ್ಯಮಗಳು ಯಾವುದೇ ರೀತಿಯ ಅವಹೇಳನಕಾರಿ ಅಸಭ್ಯ ಹೇಳಿಕೆಗಳನ್ನು ಪ್ರಕಟಿಸಿದಂತೆ ತಡೆಯಾಜ್ಞೆ ನೀಡಿದೆ.
ದೂರುದಾರರ ಪರ ಬಿಸಿರೋಡಿನ ನ್ಯಾಯವ್ಯಾದಿ ಅಶ್ವಥ್ ಎನ್ ಅವರು ವಾದಿಸಿದ್ದರು.