LATEST NEWS
ಬೇಟೆಗಾರರ ಗುಂಡೇಟಿಗೆ ಮೃತಪಟ್ಟ ಜಿಂಕೆ

ಬೇಟೆಗಾರರ ಗುಂಡೇಟಿಗೆ ಮೃತಪಟ್ಟ ಜಿಂಕೆ
ಮಂಗಳೂರು ಸೆಪ್ಟೆಂಬರ್ 25:ಬೇಟೆಗಾರರ ಗುಂಡೇಟು ತಿಂದು ಚುಕ್ಕೆ ಜಿಂಕೆಯೊಂದು ಸತ್ತ ಘಟನೆ ಗೋಪಶಿಟ್ಟಾ ಅರಣ್ಯದಲ್ಲಿ ನಡೆದಿದೆ. ಗೋಪಶಿಟ್ಟಾ ಅರಣ್ಯ ವಲಯ ವ್ಯಾಪ್ತಿಯ ಹಣಕೋಣದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಗುಂಡಿನ ಸದ್ದು ಕೇಳಿತ್ತು. ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೋಡಿದ್ದು, ಈ ವೇಳೆ ಮೃತಪಟ್ಟ ಜಿಂಕೆ ಪತ್ತೆಯಾಗಿತ್ತು.
ಅರಣ್ಯ ಸಿಬ್ಬಂದಿ ಬಂದಿದ್ದರಿಂದ ಬೇಟೆಗಾರರು ಪರಾರಿಯಾಗಿದ್ದರು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಜಿಂಕೆಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಗುಂಡು ತಗುಲಿದ್ದರಿಂದ ಮೃತಪಟ್ಟಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ನಂತರ ಜಿಂಕೆಯ ಅಂತ್ಯಸಂಸ್ಕಾರ ನಡೆಸಲಾಗಿದೆ.

ಈ ವೇಳೆ ಎಸಿಎಫ್ ಮಂಜುನಾಥ ನಾವಿ, ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ಜಿ.ವಿ.ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಭಂಡಾರಿ ಮತ್ತಿತರ ಸಿಬ್ಬಂದಿಗಳು ಇದ್ದರು.