LATEST NEWS
ಡ್ರಗ್ಸ್ ಲಿಂಕ್, ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್.ಸಿ.ಬಿ ವಿಚಾರಣೆಗೆ ಹಾಜರು….

ಡ್ರಗ್ಸ್ ಲಿಂಕ್, ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್.ಸಿ.ಬಿ ವಿಚಾರಣೆಗೆ ಹಾಜರು….
ಮುಂಬೈ, ಸೆಪ್ಟಂಬರ್ 26: ಡ್ರಗ್ಸ್ ಮತ್ತು ಬಾಲಿವುಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್.ಸಿ.ಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಹಿಂದೆ ಡ್ರಗ್ಸ್ ಮಾಫಿಯಾದ ಕೈವಾಡವಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.

ಈ ಹಿನ್ನಲೆಯಲ್ಲಿ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಅಲ್ಲದೆ ಮಾದಕವಸ್ತು ನಿಯಂತ್ರಣ ಬ್ಯೂರೋ ಕೂಡಾ ಬಾಲಿವುಡ್ ಡ್ರಗ್ಸ್ ಜಾಲದ ಕುರಿತು ತನಿಖೆ ಆರಂಭಿಸಿತ್ತು.
ತನಿಖೆ ಹಿನ್ನಲೆಯಲ್ಲಿ ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿಯನ್ನು ಮೊದಲು ವಶಕ್ಕೆ ಪಡೆದುಕೊಂಡಿದ್ದ ಎನ್.ಸಿ.ಬಿ ಬಳಿಕದ ಬೆಳವಣಿಗೆಯಲ್ಲಿ ರಿಯಾ ಸಹೋದರ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
ಇದೀಗ ಈ ಜಾಲದಲ್ಲಿ ದೀಪಿಕಾ ಪಡುಕೋಣೆ ಹೆಸರು ಕೂಡಾ ಕೇಳಿ ಬಂದಿತ್ತು.
ದೀಪಿಕಾ ಅಡ್ಮಿನ್ ಆಗಿರುವಂತಹ ವಾಟ್ಸ್ ಅಪ್ ಗ್ರೂಪ್ ನ ಚಾಟ್ ಗಳು ಎನ್.ಸಿ.ಬಿ ಕೈ ಸೇರಿದ ಹಿನ್ನಲೆಯಲ್ಲಿ ದೀಪಿಕಾಳನ್ನು ಅಧಿಕಾರಿಗಳು ತೀವೃ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ವಾಟ್ಸ್ ಅಪ್ ಮೆಸೇಜ್ ನಲ್ಲಿ ದೀಪಿಕಾ ಮಾಲ್ ಹೈ ಕ್ಯಾ ಎಂದು ತನ್ನ ಮ್ಯಾನೇಜರ್ ಕರಿಶ್ಮಾ ಪ್ರಕಾಶ್ ಜೊತೆ ಕೇಳುತ್ತಿರುವುದು ಹಾಗೂ ಬಳಿಕದ ಎಲ್ಲಾ ಚಾಟ್ ಗಳನ್ನೂ ಎನ್.ಸಿ.ಬಿ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ದೀಪಿಕಾಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ.
ಈ ಹಿನ್ನಲೆಯಲ್ಲಿ ಇಂದು ದೀಪಿಕಾ ಎನ್.ಸಿ.ಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಎನ್.ಸಿ.ಬಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡದೇ ಹೋದಲ್ಲಿ ದೀಪಿಕಾ ಪಡುಕೋಣೆಯನ್ನು ಬಂಧಿಸುವ ಸಾಧ್ಯತೆಯೂ ಹೆಚ್ಚಾಗಿದೆ.