Connect with us

    LATEST NEWS

    ಡ್ರಗ್ಸ್ ಜಾಲ ಪ್ರಕರಣ, ಪೋಲೀಸ್ ವಿಚಾರಣೆಗೆ ಮಂಗಳೂರು ಆಗಮಿಸಿದ ನಟಿ ಅನುಶ್ರೀ…

    ಡ್ರಗ್ಸ್ ಜಾಲ ಪ್ರಕರಣ, ಪೋಲೀಸ್ ವಿಚಾರಣೆಗೆ ಮಂಗಳೂರು ಆಗಮಿಸಿದ ನಟಿ ಅನುಶ್ರೀ…

    ಮಂಗಳೂರು,ಸೆಪ್ಟಂಬರ್ 26: ಡ್ರಗ್ಸ್ ಪ್ರಕಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಗೆ ಆಗಮಿಸಬೇಕಿದ್ದ ನಟಿ ಕಂ ಆ್ಯಂಕರ್ ಅನುಶ್ರೀ ಇಂದು ಪೋಲೀಸ್ ವಿಚಾರಣೆಗೆ ಆಗಮಿಸಿದ್ದಾರೆ.

    ಮಂಗಳೂರಿನ ಪಣಂಬೂರು ಪೋಲೀಸ್ ಠಾಣೆಗೆ ಆಗಮಿಸಿರುವ ಅನುಶ್ರೀ ಅವರನ್ನು ಪೋಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಡ್ರಗ್ಸ್ ಸಾಗಾಟದಲ್ಲಿ ಸಿಕ್ಕಿ ಬಿದ್ದಿದ್ದ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಬಂಧನದ ಬಳಿಕ ಆತನ ಮಾಹಿತಿಯ ಹಿನ್ನಲೆಯಲ್ಲಿ ಪೋಲೀಸರು ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕಿಶೋರ್ ಆಪ್ತ ತರುಣ್ ಎಂಬಾತನ ಮೂಲಕವೇ ಕಿಶೋರ್ ಗೆ ಡ್ರಗ್ಸ್ ಜಾಲದ ನಂಟಾಗಿದ್ದು, ಈ ಹಿನ್ನಲೆಯಲ್ಲಿ ತರುಣ್ ನನ್ನು ಪೋಲೀಸರು ಬಂಧಿಸಿದ್ದಾರೆ.

    ತರುಣ್ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅನುಶ್ರೀ ಆತನ ಜೊತೆ ನಿಕಟ ಸಂಬಂದವಿರಿಸಿದ್ದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ತರುಣ್ ಹಾಗೂ ಅನುಶ್ರೀ ನಡುವಿನ ಸಂಬಂಧಗಳೇನು ಎನ್ನುವ ವಿಚಾರವಾಗಿ ಪೋಲೀಸರು ಅನುಶ್ರೀಯನ್ನು ಪ್ರಶ್ನಿಸುವ ಸಾಧ್ಯತೆಯಿದೆ. ತರುಣ್ ಜೊತೆ ಅನುಶ್ರೀ ನಡೆಸಿದ ವಾಟ್ ಅಪ್ ಮೆಸೇಜ್ ಗಳು ಈಗಾಗಲೇ ಮಂಗಳೂರು ಪೋಲೀಸರಿಗೆ ದೊರೆತಿದ್ದು, ಇದರಲ್ಲಿ ಅನುಶ್ರೀ ಹಾಗೂ ತರುಣ್ ಸ್ನೇಹದ ಬಗ್ಗೆ ತಿಳಿದುಬಂದಿದೆ.

    ಅನುಶ್ರೀಗೂ ಡ್ರಗ್ಸ್ ಗೂ ಸಂಬಂಧವಿದೆಯೋ ಎನ್ನುವ ವಿಚಾರಣೆಯನ್ನು ಪೋಲೀಸರು ಇಂದು ನಡೆಸುವ ಸಾಧ್ಯತೆಯಿದೆ.

    Share Information
    Advertisement
    Click to comment

    You must be logged in to post a comment Login

    Leave a Reply