Connect with us

LATEST NEWS

ಬಾಲಿವುಡ್ ಡ್ರಗ್ಸ್ ಜಾಲ, ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಸಂಕಷ್ಟ…….

ಬಾಲಿವುಡ್ ಡ್ರಗ್ಸ್ ಜಾಲ, ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಸಂಕಷ್ಟ…….

ಮುಂಬೈ, ಸೆಪ್ಟಂಬರ್ 22: ಬಾಲಿವುಡ್ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ ನೋಟೀಸ್ ಜಾರಿ ಮಾಡಿದೆ.

ಬಾಲಿವುಡ್ ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಟಿಯಾಗಿರುವ ದೀಪಿಕಾ ಹೆಸರು ಇದೀಗ ಡ್ರಗ್ಸ್ ಜಾಲದಲ್ಲಿ ಕೇಳಿ ಬಂದ ಹಿನ್ನಲೆಯಲ್ಲಿ ಎನ್.ಸಿ.ಬಿ ದೀಪಿಕಾಳನ್ನು ಪ್ರಶ್ನಿಸಲಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಹಿಂದೆ ಡ್ರಗ್ಸ್ ಮಾಫಿಯಾದ ಕೈವಾಡದ ಬಗ್ಗೆ ತನಿಖೆ ಆರಂಭಿಸಿರುವ ಎನ್.ಸಿ.ಬಿ ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ, ಆಕೆಯ ಸಹೋದರ ಸೇರಿದಂತೆ ಹಲವರನ್ನು ಈಗಾಗಲೇ ಬಂಧಿಸಿದೆ.

ಇದೀಗ ಮತ್ತೆ ಬಾಲಿವುಡ್ ನ ಖ್ಯಾತನಾಮರ ಹೆಸರು ಈ ದಂಧೆಯಲ್ಲಿ ಕೇಳಿ ಬರಲಾರಂಭಿಸಿದೆ.

ನಟಿ ದೀಪಿಕಾ ಪಡುಕೋಣೆ ತನ್ನ ಮ್ಯಾನೇಜರ್ ಕರಿಶ್ಮಾ ಪ್ರಕಾಶ್ ಜೊತೆ ಡ್ರಗ್ಸ್ ಬಗ್ಗೆ ಮಾಡಿದ್ದ ವಾಟ್ಸ್ಅಪ್ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದ್ದು, ಈ ಹಿನ್ನಲೆಯಲ್ಲಿ ಎನ್.ಸಿ.ಬಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ದೀಪಿಕಾಳ ಹಿಂದೆ ಬಿದ್ದಿದೆ.

ವಾಟ್ಸ್ ಅಪ್ ಮೆಸೇಜ್ ನಲ್ಲಿ ದೀಪಿಕಾ ತನ್ನ ಮ್ಯಾನೇಜರ್ ಜೊತೆ ಮಾಲ್ ಇದೆಯಾ ಎಂದು ಕೇಳುತ್ತಿರುವುದು ಹಾಗೂ ಕರಿಶ್ಮಾ ಈ ಬಗ್ಗೆ ಇದೆ ಎನ್ನುವ ಮರು ಉತ್ತರ ನೀಡುತ್ತಿರುವುದರ ಎಲ್ಲಾ ಚಾಟ್ ಗಳು ಇದೀಗ ಎನ್.ಸಿ.ಬಿ ಕೈ ಸೇರಿದೆ.

ಕರಿಶ್ಮಾ ಪ್ರಕಾಶ್ ಗೂ ಎನ್.ಸಿ.ಬಿ ಈಗಾಗಲೇ ನೋಟೀಸ್ ಜಾರಿ ಮಾಡಿದ್ದು, ಅನಾರೋಗ್ಯದ ಕಾರಣ ಹೇಳಿ ಸೆಪ್ಟಂಬರ್ 25 ರ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಕರಿಶ್ಮಾ ಎನ್.ಸಿ.ಬಿ ಗೆ ಪತ್ರ ಬರೆದಿದ್ದಾಳೆ.

ಈ ನಡುವೆ ಇದೀಗ ನೇರವಾಗಿ ದೀಪಿಕಾ ಳ ವಿಚಾರಣೆ ನಡೆಸಲು ಎನ್.ಸಿ.ಬಿ ಮುಂದಾಗಿರುವುದು ಅಚ್ಚರಿಗೂ ಕಾರಣವಾಗಿದೆ.

ದೀಪಿಕಾ ಚಿತ್ರವೊಂದರ ಶೂಟಿಂಗ್ ಗಾಗಿ ಗೋವಾದಲ್ಲಿದ್ದು, ಎನ್.ಸಿ.ಬಿ ನೋಟೀಸನ್ನು ದೀಪಿಕಾಳ ಮುಂಬೈ ನಿವಾಸಕ್ಕೆ ತಲುಪಿಸಿದೆ. ದೀಪಿಕಾಳ ಜೊತೆಗೆ ನಟಿಯರಾದ ಶ್ರದ್ಧಾ ಕಪೂರ್, ಸರಾ ಖಾನ್, ರಕೂಲ್ ಪ್ರೀತ್ ಗೂ ನೋಟೀಸ್ ಜಾರಿ ಮಾಡಲಾಗಿದೆ.