Connect with us

    LATEST NEWS

    ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ನಾಮಫಲಕ..ಪೊಲೀಸ್ ಇಲಾಖೆಯಿಂದ ತೆರವು

    ಮಂಗಳೂರು : ಮಂಗಳೂರಿನಲ್ಲಿ ರಸ್ತೆ ನಾಮಫಲಕ ವಿವಾದ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಕೊರೊನಾದ ಮಾಹಾಮಾರಿ ಸಮಯದಲ್ಲಿ ಜಿಲ್ಲೆಯಲ್ಲಿ ರಸ್ತೆ ರಾಜಕಾರಣ ನಡೆಯುತ್ತಿದೆ.


    ಇಂದು ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರ ರಾಮಶೆಟ್ಟಿ ರಸ್ತೆ ಹೆಸರು ನಾಮಕರಣಗೊಂಡ ಬೆನ್ನಲೆ ಈಗ ಮಂಗಳೂರು ಲೇಡಿಹಿಲ್‌ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ನಾಮಫಲಕವನ್ನು ಬಜರಂಗದಳದ ಕಾರ್ಯಕರ್ತರ ಇಂದು ಅನಾವರಣಗೊಳಿಸಿದ್ದಾರೆ.


    ಆದರೆ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನಧಿಕೃತವಾಗಿ ಅಳವಡಿಸಿದ್ದ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ಅಲ್ಲದೆ ಸಂಘಟನೆ ಕಾರ್ಯಕರ್ತರು ಅಲ್ಲಿ ಅಳವಡಿಸಿದ್ದ ಇತರೆ ಕರಪತ್ರಗಳನ್ನು ಕೂಡಾ ತೆರವುಗೊಳಿಸಿದ್ದಾರೆ.


    ಈ ನಡುವೆ ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣಗುರು ಅವರ ಹೆಸರನ್ನು ಇಡಬೇಕೆಂದು ಬಿರುವೆರ್ ಕುಡ್ಲ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಮಂಗಳೂರು ಮಹಾನಗರಪಾಲಿಕೆಯನ್ನು ಒತ್ತಾಯಿಸಿದ್ದವು. ಆದರೆ ಈ ಒತ್ತಾಯದ ಬೆನ್ನಲ್ಲೇ ವಿವಿಧ ಕ್ರೈಸ್ತ ಸಂಘಟನೆಗಳು ಯಾವುದೇ ಕಾರಣಕ್ಕೂ ಲೆಡಿಹಿಲ್ ವೃತ್ತದ ಹೆಸರು ಬದಲಾಯಿಸಬಾರದೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು.


    ಈ ನಡುವೆ ಇದೀಗ ಖಾಸಗಿ ಬಸ್‌ ಮಾಲೀಕರು ಲೇಡಿಹಿಲ್‌‌ ಜಂಕ್ಷನ್‌‌‌ ಅನ್ನು ನಾರಾಯಣ ಗುರು ವೃತ್ತಕ್ಕೆ ಮರುನಾಮಕರಣ ಮಾಡುವುದನ್ನು ಬೆಂಬಲಿಸಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಕ್ರಮಕ್ಕೆ ಮಂಗಳೂರಿನ ಹಲವಾರು ಖಾಸಗಿ ಬಸ್ಸುಗಳು ಬೆಂಬಲ ನೀಡಿದ್ದು, ಬಸ್ಸುಗಳಲ್ಲಿ ನಾರಾಯಣ ಗುರು ಸರ್ಕಲ್‌ ಎನ್ನುವ ಫಲಕಗಳನ್ನು ಹಾಕಿಕೊಂಡಿವೆ.

    Share Information
    Advertisement
    Click to comment

    You must be logged in to post a comment Login

    Leave a Reply