Connect with us

    LATEST NEWS

    ಏರಿಕೆಯಲ್ಲಿ ಕೊರೊನಾ – ಭಾರತದೊಂದಿಗಿನ ಎಲ್ಲಾ ವಿಮಾನಯಾನಗಳನ್ನು ರದ್ದುಗೊಳಿಸಿದ ಸೌದಿ ಅರೇಬಿಯಾ

    ಸೌದಿ ಅರೇಬಿಯಾ : ಪ್ರಪಂಚದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣದಲ್ಲಿ ದಾಖಲಾದ ದೇಶಗಳಲ್ಲಿ ಭಾರತ ಇದ್ದು, ಈ ನಡುವೆ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಭಾರತಕ್ಕೆ ತನ್ನಲ್ಲಿಂದ ತೆರಳುವ ಹಾಗೂ ಭಾರತದಿಂದ ತನ್ನ ದೇಶಕ್ಕೆ ಬರುವ ಪ್ರಯಾಣವನ್ನು ಸೌದಿ ಅರೇಬಿಯಾ ನಿರ್ಬಂಧಿಸಿದೆ.


    ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು (ಜಿಎಸಿಎ) ಈ ಆದೇಶ ಹೊರಡಿಸಿದೆ. ಭಾರತ ಮಾತ್ರವಲ್ಲದೆ ಬ್ರೆಜಿಲ್ ಹಾಗೂ ಅರ್ಜೆಂಟೈನಾ ದೇಶಗಳೊಂದಿಗೆ ಓಡಾಟಗಳಿಗೂ ಸೌದಿ ನಿರ್ಬಂಧ ವಿಧಿಸಿದೆ. ಇದು ಸೌದಿಗೆ ಪ್ರಯಾಣಿಸಲು ಈಗಾಗಲೇ ಮಾಹಿತಿ ನೀಡಿರುವ, ವಿಮಾನ ಟಿಕೆಟ್ ಕಾಯ್ದಿರಿಸುವವರಿಗೂ ಅನ್ವಯವಾಗಲಿದೆ.


    ಈ ಸಂಬಂಧ ಜಿಎಸಿಎ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ‘ಸೌದಿ ಅರೇಬಿಯಾವು ಭಾರತ, ಬ್ರೆಜಿಲ್ ಮತ್ತು ಅರ್ಜೆಂಟೈನಾಗಳಿಗೆ ತೆರಳುವ ಮತ್ತು ಅವುಗಳಿಂದ ಆಗಮಿಸುವ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ. ಸೌದಿಗೆ ಆಗಮಿಸುವ 14 ದಿನಗಳ ಮುಂಚಿನ ಪ್ರಸ್ತಾವನೆಯನ್ನು ನೀಡಿರುವ ಯಾವುದೇ ವ್ಯಕ್ತಿಗೂ ಇದು ಅನ್ವಯವಾಗಲಿದೆ’ ಎಂದು ಅದು ತಿಳಿಸಿದೆ. ಸೌದಿ ಅರೇಬಿಯಾದ ಎಲ್ಲ ವಿಮಾನ ನಿಲ್ದಾಣಗಳ ವಿಮಾನ ಸಂಸ್ಥೆಗಳಿಗೂ ಇದರ ಮಾಹಿತಿ ನೀಡಲಾಗಿದೆ. ಈ ಮೂರೂ ದೇಶಗಳಿಂದ ಅಧಿಕೃತ ಸರ್ಕಾರಿ ಆಮಂತ್ರಣ ಹೊಂದಿರುವವರಿಗೆ ಮಾತ್ರವೇ ಸೌದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply