Connect with us

FILM

ಐಶ್ವರ್ಯಾ ರೈ ಜೊತೆ ನಾನು ಡೈವೋರ್ಸ್ ಪಡೆಯಲಿದ್ದೇವೆ – ಅಭಿಷೇಕ್ ಬಚ್ಚನ್ ಡೀಪ್ ಫೇಕ್ ವಿಡಿಯೋ ವೈರಲ್

ಮುಂಬೈ ಅಗಸ್ಟ್ 11: ಬಾಲಿವುಡ್ ನ ಖಾತ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳನ್ನು ಕಳೆದ ಕೆಲವು ತಿಂಗಳಿನಿಂದ ಕೇಳಿ ಬರುತ್ತಿದೆ. ಇತ್ತೀಚೆಗೆ ಅಂಬಾನಿ ಮದುವೆ ಸಂಭ್ರಮದಲ್ಲೂ ಇಬ್ಬರೂ ಬೇರೆ ಬೇರೆಯಾಗಿ ಬಂದು ಭಾಗವಹಿಸಿದ್ದು ಅವರ ನಡುವಿನ ಬಿರುಕಿನ ಬಗ್ಗೆ ಕುತೂಹಲಕ್ಕೆ ಕಾರಣವಾಗಿತ್ತು.


ಇದೀಗ ಕಿಡಿಗೇಡಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅಭಿಷೇಕ್ ಬಚ್ಚನ್ ಅವರ ಡಿಫ್ ಪೇಕ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಈ ವಿಡಿಯೋ ಮಾಡಲಾಗಿದೆ. ಅದರಲ್ಲಿ ಅಭಿಷೇಕ್, “ಈ ಜುಲೈನಲ್ಲಿ, ಐಶ್ವರ್ಯ ಮತ್ತು ನಾನು ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ” ಎಂದು ಹೇಳುವುದನ್ನು ಈ ವಿಡಿಯೋ ಹೊಂದಿದೆ. ಈ ವಿಡಿಯೋ ನಕಲಿ ಎಂದು ಹೇಳಲಾಗಿದ್ದು,


ಈ ವೀಡಿಯೊವನ್ನು ನಕಲಿ ಎಂದು ಕರೆದಿರುವ ಅನೇಕ ಅಭಿಮಾನಿಗಳು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬೆಂಬಲಕ್ಕೆ ನಿಂತಿದ್ದಾರೆ. ದಂಪತಿಯನ್ನು ಸಮರ್ಥಿಸುತ್ತಾ, ಬಳಕೆದಾರರು ಬರೆದಿದ್ದಾರೆ, “ಇದು ನಿಜವಾಗಿಯೂ ದುಃಖಕರವಾಗಿದೆ! ನಕಲಿ ಧ್ವನಿಯನ್ನು ಬಳಸಲು ಮತ್ತು ಈ ರೀತಿಯ ವೀಡಿಯೊವನ್ನು ಡಬ್ ಮಾಡಿದ್ದಾರೆ ಎಂದಿದ್ದಾರೆ. ಕಳೆದ ತಿಂಗಳು, ಅಂಬಾನಿ ವಿವಾಹದಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ಪ್ರತ್ಯೇಕವಾಗಿ ಕಾಣಿಸಿಕೊಂಡರು , ಇದು ಬಿರುಕುಗಳ ವದಂತಿಗಳಿಗೆ ಕಾರಣವಾಯಿತು. ವಿಚ್ಛೇದನದ ಪೋಸ್ಟ್‌ನಲ್ಲಿ ಅಭಿಷೇಕ್ ಬಚ್ಚನ್ ಅವರ ‘ಲೈಕ್’ ಊಹಾಪೋಹವನ್ನು ಹೆಚ್ಚಿಸಿದೆ.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *