Connect with us

    LATEST NEWS

    ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ದೀಪಕ್ ರಾವ್ ಅಂತ್ಯಕ್ರಿಯೆ

    ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ದೀಪಕ್ ರಾವ್ ಅಂತ್ಯಕ್ರಿಯೆ

    ಮಂಗಳೂರು ಜನವರಿ 4: ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಯಾದ ದೀಪಕ್ ರಾವ್ ಅವರ ಅಂತ್ಯಕ್ರಿಯೆ ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಜನತಾ ಕಾಲೋನಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ದೀಪಕ್ ಚಿತೆಗೆ ಸಹೋದರ ಸತೀಶ್ ಅಗ್ನಿ ಸ್ಪರ್ಶ ಮಾಡಿದರು.

    ದೀಪಕ್ ಅಂತಿಮ ದರ್ಶನಕ್ಕೆ ಬಂದಿದ್ದ ಸಾವಿರಾರು ಜನರು ದೀಪಕ್ ರಾವ್ ಅಮರ್‌ ಹೇ ಎಂದು ಜೈಕಾರ ಮುಗಿಲು ಮುಟ್ಟಿತ್ತು. ಮಂಗಳೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾಟಿಪಳ್ಳದ ಗಣೇಶ ಪುರ ದಲ್ಲಿರುವ ಕೊಲೆಯಾದ ದೀಪಕ್ ರಾವ್ ಅವರ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ ಅದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗು ದೀಪಕ್ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ದೀಪಕ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದೀಪಕ್ ಕುಟುಂಬಕ್ಕೆ 10 ಲಕ್ಷ ರು, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

    ಜಿಲ್ಲಾಧಿಕಾರಿ ಅವರ ಸಂಧಾನ ಸಫಲವಾದ ಕಾರಣ ದೀಪಕ್ ಶವಯಾತ್ರೆ ನಡೆಸಲು ಜಿಲ್ಲಾಧಿಕಾರಿ ಸೆಂಥಿಲ್ ಅವಕಾಶ ನೀಡಿದರು. ಈ ಹಿನ್ನೆಲೆಯಲ್ಲಿ ಕಾಟಿಪಳ್ಳದ ನಿವಾಸದಿಂದ ಅಂತಿಮಯಾತ್ರೆ ಆರಂಭವಾಗಿ ಜನತಾ ಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯತ್ತ ಸಾಗಿತು. ನಂತರ ಶಿವಾಜಿ ಕ್ಷತ್ರಿಯ ವಿಧಿ-ವಿಧಾನದಂತೆ ದೀಪಕ್ ಅಂತ್ಯಕ್ರಿಯೆ ನಡೆಯಲಿದೆ. ಸಾವಿರಾರು ಜನರು ಈ ಅಂತಿಮಯಾತ್ರೆ ಪಾಲ್ಗೊಂಡರು.

    Share Information
    Advertisement
    Click to comment

    You must be logged in to post a comment Login

    Leave a Reply