Connect with us

    LATEST NEWS

    ಉತ್ತರ ಪ್ರದೇಶ – ಬಸ್ ಟ್ರಕ್ ಮುಖಾಮುಖಿ ಡಿಕ್ಕಿ -10 ಮಂದಿ ಸಾವು

    ಉತ್ತರ ಪ್ರದೇಶ : ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಟ್ರಕ್ ಹಾಗೂ ಬಸ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.


    ಆಗ್ರಾ ಹಾಗೂ ಮೊರಾದಾಬಾದ್ ಹೈ ವೇಯಲ್ಲಿ ಬೆಳಗಿನಜಾವ ಘಟನೆ ಸಂಭವಿಸಿದ್ದು, ದಟ್ಟ ಮಂಜು ಆವರಿಸಿದ್ದರಿಂದ ದಾರಿ ಕಾಣದೆ ಅವಘಡ ಸಂಭವಿಸಿದೆ. ಬಸ್, ಟ್ರಕ್ ಹಾಗೂ ಮತ್ತೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿದೆ.


    ರಕ್ಷಣಾ ಕಾರ್ಯಾಚರಣೆ ಅಂತ್ಯವಾಗಿದ್ದು, ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಓವರ್ ಟೇಕ್ ಮಾಡುವಾಗ ಅವಘಡ ಸಂಭವಿಸಿರುವ ಕುರಿತು ಪ್ರತ್ಯಕ್ಷದರ್ಶಿ ಮಾಹಿತಿ ನೀಡಿರುವುದಾಗಿ ಮೊರಾದಾಬಾದ್ ಎಸ್‍ಎಸ್‍ಪಿ ಮಾಹಿತಿ ನೀಡಿದ್ದಾರೆ

    ಮೃತರ ಕುಟುಂಬಸ್ಥರಿಗೆ ₹ 2 ಲಕ್ಷ, ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ‌ ಘೋಷಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply