LATEST NEWS
ಕೊಡೇರಿ ನಾಡದೋಣಿ ದುರಂತ ಇಂದು ಇಬ್ಬರು ಮೀನುಗಾರರ ಶವ ಪತ್ತೆ
ಉಡುಪಿ ಅಗಸ್ಟ್ 17: ಕೊಡೇರಿ ನಾಡದೋಣಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರಲ್ಲಿ ಇಂದು ಇಬ್ಬರು ಮೀನುಗಾರರ ಶವ ಪತ್ತೆಯಾಗಿದೆ. ಇದರೊಂದಿಗೆ ನಾಲ್ವರಲ್ಲಿ ಮೂವರು ಮೃತದೇಹ ಪತ್ತೆಯಾದಂತಾಗಿದೆ.
ಇಂದು ಪತ್ತೆಯಾದ ಎರಡು ಮೃತದೇಹಗಳಲ್ಲಿ ಲಕ್ಷ್ಮಣ ಖಾರ್ವಿ ಹಾಗೂ ಶೇಖರ ಖಾರ್ವಿ ಅವರದ್ದೆಂದು ಗುರುತಿಸಲಾಗಿದೆ. ಈ ಮೃತ ದೇಹ ಘಟನೆ ನಡೆದ ಸ್ಥಳವಾದ ಕೊಡೇರಿ ಅಳಿವೆ ಬಾಗಿಲಿನಿಂದ ದಕ್ಷಿಣದ ಸುಮಾರು 5 ಕಿ.ಮೀ. ದೂರದಲ್ಲಿರುವ ಹಾದರಗೋಳಿ ಎಂಬಲ್ಲಿ ಪತ್ತೆಯಾಗಿದೆ. ನಾಡದೋಣಿ ಬಂಡೆಗೆ ಡಿಕ್ಕಿಯಾಗಿ ನಾಲ್ವರು ನಾಪತ್ತೆಯಾಗಿದ್ದರು, ನಾಲ್ವರ ಪೈಕಿ ನಾಗರಾಜ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಶವ ಪತ್ತೆಯಾಗಿದ್ದು, ಮಂಜುನಾಥ ಖಾರ್ವಿ ಅವರ ಶವ ಇನ್ನೂ ಪತ್ತೆಯಾಗಿಲ್ಲ.
ಈ ನಡುವೆ ಕೊಡೇರಿ ನಾಡದೋಣಿ ದುರಂತ ಪ್ರಕರಣ ನಡೆದ ಸ್ಥಳದಿಂದ ಅರ್ಧ ಕಿ.ಮೀ ದೂರದಲ್ಲಿ ಶವ ತೆಲುತ್ತಿರುವ ದೃಶ್ಯ ಡ್ರೋನ್ ಕ್ಯಾಮರಕ್ಕೆ ಸೆರೆಯಾಗಿದೆ. ಆದರೆ ಕಡಲು ಪ್ರಕ್ಷ್ಯುಬ್ದವಾಗಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ತೊಡಕು ಉಂಟಾಗಿದೆ.
ಹವಮಾನ ಇಲಾಖೆ ಈಗಾಗಲೇ ಕಡಲು ಪ್ರಕ್ಷುಬ್ದಗೊಂಡಿರುವ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆ ನಾಪತ್ತೆಯಾಗಿರುವ ಮೀನುಗಾರರ ಹುಡುಕಾಟಕ್ಕೆ ಕಡಲಿಗಿಳಿಯಲು ಅಸಾಧ್ಯವಾಗಿದೆ. ಈ ಹಿನ್ನಲೆ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಸಮುದ್ರದ ದಡದಿಂದ ಡ್ರೋನ್ ಮೂಲಕ ಹುಡುಕಾಟ ನಡೆಸಿದ್ದರು. ಈ ವೇಳೆ ಶವ ಪತ್ತೆಯಾಗಿದೆ.
ನಾಳೆ ಇನ್ನಷ್ಟು ಕಾರ್ಯಾಚರಣೆ ಚುರುಕುಗೊಳ್ಳಲಿದೆ. ಇಲ್ಲಿಯವರೆಗೆ ನಾಪತ್ತೆಯಾಗಿರುವ ನಾಲ್ವರ ಪೈಕಿ ಈವರೆಗೆ ದಡ ಸೇರಿದ್ದು 3 ಶವ. ಆದರೆ ಡ್ರೋಣ್ ಕಾರ್ಯಾಚರಣೆಯಲ್ಲಿ ಕಣ್ಣೆದುರು ಶವ ಕಾಣಿಸುತ್ತಿದ್ದರೂ ಸಮುದ್ರಕ್ಕಿಳಿದು ಕಾರ್ಯಾಚರಣೆ ನಡೆಸಲು ಅಸಾಧ್ಯವಾದ ಸ್ಥಿತಿ ಬಂದೊದಗಿದೆ. ಇದು ಕೊಡೇರಿ ದೋಣಿ ದುರಂತದ ಭಯಾನಕ ಸ್ಥಿತಿ ಕಡಲಿನ ಅಲೆಯಲ್ಲಿ ಎರಡು ಶವಗಳು ಸಿಕ್ಕಿಬಿದ್ದರೂ ಕಡಲ ಮಕ್ಕಳಿಗೆ ತಮ್ಮವರ ಶವಗಳನ್ನು ಮೇಲೆ ತರಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ.