Connect with us

LATEST NEWS

ಕೊಡೇರಿ ಮೀನುಗಾರಿಕಾ ದೋಣಿ ದುರಂತ – ಸಮುದ್ರ ಪಾಲಾಗಿದ್ದ ನಾಲ್ಕು ಜನರ ಮೃತದೇಹಗಳು ಪತ್ತೆ

ಕುಂದಾಪುರ: ಕಿರಿಮಂಜೇಶ್ವರದ ಕೊಡೇರಿ ಸಮುದ್ರತೀರದಲ್ಲಿ ಭಾನುವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಎಲ್ಲಾ ನಾಲ್ವರು ಮೀನುಗಾರರ ಶವ ಪತ್ತೆಯಾಗಿದೆ.

ಹೊಸಹಿತ್ಲು ಬಳಿ ನಾಗರಾಜ ಖಾರ್ವಿ (55), ಕೊಡೇರಿಯಿಂದ 5 ಕಿ.ಮೀ ದೂರದ ಆದರಗೋಳಿ ಸಮೀಪ ಲಕ್ಷ್ಮಣ ಖಾರ್ವಿ (34) ಹಾಗೂ ಶೇಖರ್ ಖಾರ್ವಿ ಶವ (39) ಮತ್ತು ಗಂಗೆ ಬೈಲು ಪರಿಸರದಲ್ಲಿ ಮಂಜುನಾಥ ಖಾರ್ವಿ ಅವರ ಮೃತ ದೇಹ ಪತ್ತೆಯಾಗಿದೆ. ಇದರೊಂದಿಗೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರ ಮೃತ ದೇಹಗಳು ಪತ್ತೆಯಾದಂತಾಗಿದೆ.


ಭಾನುವಾರ ಶ್ರೀ ಸಾಗರ್ ಹೆಸರಿನ ದೋಣಿ ಅಲೆಗಳ ಉಬ್ಬರಕ್ಕೆ ಸಿಲುಕಿ ಬಂಡೆಗಳಿಗೆ ಅಪ್ಪಳಿಸಿ ಸಮುದ್ರದಲ್ಲಿ ಮಗುಚಿ ಬಿದ್ದಿತ್ತು. ದೋಣಿಯಲ್ಲಿದ್ದ 12 ಮೀನುಗಾರರ ಪೈಕಿ 8 ಮಂದಿಯನ್ನು ರಕ್ಷಿಸಲಾಗಿತ್ತು. ನಾಲ್ವರು ನಾಪತ್ತೆಯಾಗಿದ್ದರು. ಕಡಲಿನ ಅಬ್ಬರ ಹೆಚ್ಚಾಗಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿತ್ತು. ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯವರ ಸತತ ಕಾರ್ಯಾಚರಣೆ ನಡೆಸಿದ್ದರು.

 

Facebook Comments

comments