Connect with us

  KARNATAKA

  ಜಿಲ್ಲೆಗೆ ಖತರ್ನಾಕ್ ಚಡ್ಡಿ ಗ್ಯಾಂಗ್  ಎಂಟ್ರಿ, ಎಚ್ಚರಿಕೆಯಿಂದಿರಲು ಸಾರ್ವಜನಿಕರಿಗೆ ವಿಜಯಪುರ ಪೊಲೀಸ್ ಮನವಿ…!!

  ವಿಜಯಪುರ: ಖತರ್ನಾಕ್ ಚಡ್ಡಿ ಗ್ಯಾಂಗ್  ರಾಜ್ಯದ ಗಡಿ ಜಿಲ್ಲೆ ವಿಜಯಪುರಕ್ಕೆ ಎಂಟ್ರಿ ಕೊಟ್ಟಿದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

  ಕಳೆದ ಕೆಲವು ದಿನಗಳಿಂದ ವಿಜಯಪುರ ನಗರದಲ್ಲಿ ಚಡ್ಡಿ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದೆ. ಚಡ್ಡಿ ಧರಿಸಿ, ಮಾಸ್ಕ್ ಮತ್ತು ಮಫ್ಲರ್ ಹಾಕಿ ಗುಂಪುಕಟ್ಟಿಕೊಂಡು  ಕಳ್ಳತನ ಮಾಡಿದ ಈ ಗ್ಯಾಂಗ್ ಕೃತ್ಯಗಳು ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭಯಾನಕ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. 5 ರಿಂದ 8 ಜನರು ಈ ಗ್ಯಾಂಗ್ ನಲ್ಲಿ ಇದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ದರೋಡೆ ಮಾಡುವ ಚಡ್ಡಿ ಗ್ಯಾಂಗ್ ಇದಾಗಿದೆ.
  ಸಾರ್ವಜನಿಕರು ಚಡ್ಡಿ ಗ್ಯಾಂಗ್‌‌ನಿಂದ ಎಚ್ಚರಿಕೆ ವಹಿಸುವಂತೆ ಪೊಲೀಸ ಇಲಾಖೆಯಿಂದ ಸೂಚನೆ ನೀಡಿದ್ದಾರೆ. ಅದಕ್ಕಾಗಿ ಇದರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸ ಇಲಾಖೆಯಿಂದ ಜಾಗೃತಿ ಮೂಡಿಸಿದ್ದಾರೆ. 9480804200 ಅಥವಾ 112 ಗೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply