LATEST NEWS
ಮಂಗಳೂರು ಕರಾವಳಿಗೂ ಓಖೀ ಭೀತಿ : ಕಟ್ಟೆಚ್ಚರ ಘೋಷಣೆ
ಮಂಗಳೂರು ಕರಾವಳಿಗೂ ಓಖೀ ಭೀತಿ : ಕಟ್ಟೆಚ್ಚರ ಘೋಷಣೆ
ಮಂಗಳೂರು,ಡಿಸೆಂಬರ್ 01: ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವ ಕರ್ನಾಟಕದ ಕರಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಹವಾಮಾನ ಇಲಾಖೆ ಹೊರಡಿಸಿರುವ ಪ್ರಕಟನೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಗಾಳಿ ಬೀಸಲಿದ್ದು, ಜೊತೆಗೆ ಮಳೆಯೂ ಆಗಲಿದೆ ಎಂದಿದೆ.
ಅಲ್ಲದೆ ಸಮುದ್ರದ ಅಬ್ಬರವೂ ಹೆಚ್ಚಾಗಲಿದ್ದು, ಮುಂದಿನ 48 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಹಿಂದೂ ಮಹಾಸಾಗರದಲ್ಲಿ ಈ ಖುತುವಿನ ಮೊದಲ ಚಂಡಮಾರುತ ಓಖೀ ತನ್ನ ಪ್ರಭಾವವನ್ನು ಈಗಾಗಲೇ ತಮಿಳುನಾಡು ಹಾಗೂ ಕೇರಳದ ಬಹುಪಾಲು ಪ್ರದೇಶದಲ್ಲಿ ತೋರಿಸಿದ್ದು, ಇದರಿಂದಾಗಿ ಈಗಾಗಲೇ 9 ಜನರು ಸಾವನ್ನಪ್ಪಿದ್ದು, 100 ಕ್ಕೂ ಮಿಕ್ಕಿದ ಜನರಿಗೆ ಗಂಭೀರ ಗಾಯಗಳಾಗಿವೆ.
ಅಲ್ಲದೆ ಕೋಟ್ಯಾಂತರ ರೂಪಾಯಿಗಳ ಆಸ್ತಿ-ಪಾಸ್ತಿಗಳೂ ನಾಶವಾಗಿದೆ. ಇದೀಗ ಈ ಓಖೀ ಚಂಡಮಾರುತ ಅರಬ್ಬೀ ಸಮುದ್ರದ ಮೂಲಕ ಹಾದುಹೋಗಲಿದ್ದು,
ಇದರಿಂದಾಗಿ ಕರ್ನಾಟಕದ ಕರಾವಳಿಯ ಅದರಲ್ಲೂ ಮಂಗಳೂರು ಕರಾವಳಿ ಮೇಲೆ ಇದರ ಪರಿಣಾಮ ಬೀರಲಿದೆ. ಈಗಾಗಲೇ ಕರಾವಳಿಯ ಬಹು ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಭಾರೀ ಗಾಳಿಯೂ ಬೀಸುತ್ತಿದೆ.
Kerala & Karnataka coast: Fishermen are advised not to venture into the sea along & off
Kerala & Karnataka coast during next 48 hrs.
ನಿಜವಾದ ಹಿರಿಯ ವಿಜ್ಞಾನಿಯ ಭವಿಷ್ಯ..??
ಡಿಸೆಂಬರ್ 31 ರ ಒಳಗೆ ಭಾರತ ಸೇರಿದಂತೆ ಏಷ್ಯಾ ಖಂಡದ 11 ರಾಷ್ಟ್ರಗಳಿಗೆ ಸುನಾಮಿ ಅಪ್ಪಳಿಸಲಿದೆ ಎಂದು ಕೇರಳದ ಹಿರಿಯ ವಿಜ್ಞಾನಿ ಬಾಬು ಕಲಾಯಿಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ವಿಚಾರವನ್ನು ಇಲ್ಲಿ ಗಮನಿಸಬೇಕಿದೆ.
ಹಿಂದೂ ಮಹಾಸಾಗರದಲ್ಲಿ ಉಂಟಾದ ಭೂಕಂಪದಿಂದ ಏಳುವ ಸುನಾಮಿ ಭಾರತದ ಮೇಲೆ ತೊಂದರೆಯುಂಟು ಮಾಡಲಿದೆ ಎಂದು ಅವರು ಇತ್ತೀಚೆಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದರು.
ಇದಕ್ಕೆ ಪೂರಕವೆಂಬಂತೆ ಓಖೀ ಚಂಡಮಾರುತ ಈಗಾಗಲೇ ತಮಿಳುನಾಡು ಹಾಗೂ ಕೇರಳದಲ್ಲಿ ಭಾರೀ ಅನಾಹುತವನ್ನು ಸೃಷ್ಟಿಸಿದೆ.
ಬಾಬು ಕಲಾಯಿಲ್ ಈ ಹಿಂದೆಯೂ 2004 ರಲ್ಲಿ ಸುನಾಮಿ ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಆ ಸಮಯದಲ್ಲಿ ಸಂಭವಿಸಿದ ಸುನಾಮಿಯಲ್ಲಿ ಇಡೀ ತಮಿಳುನಾಡು ಕರಾವಳಿಯೇ ಧೂಳೀಪಟವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
Breakink News:
ಈ ಮಧ್ಯೆ ಓಖೀ ಚಂಡಮಾರುತ ಹೊಡೆತದ ಹಿನ್ನೆಲೆಯಲ್ಲಿ ಮಂಗಳೂರು ಹಳೇ ಬಂದರಿನಿಂದ ಲಕ್ಷ ದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಎರಡು ನೌಕೆಗಳು ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿವೆ. ಮತ್ತೊಂದು ಅಪಘಾತಕ್ಕೀಡಾಗಿ ಮುಳುಗುವ ಹಂತದಲ್ಲಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
You must be logged in to post a comment Login