LATEST NEWS
ಮತ್ತೆ ಮಹಿಳೆಯ ಚಿನ್ನ ಕಸಿದು ಪರಾರಿಯಾದ ಖದೀಮರು : ಕಣ್ಮುಚ್ಚಿ ಕುಳಿತ ಉಡುಪಿ ಪೋಲಿಸ್ ಇಲಾಖೆ
ಮತ್ತೆ ಮಹಿಳೆಯ ಚಿನ್ನ ಕಸಿದು ಪರಾರಿಯಾದ ಖದೀಮರು : ಕಣ್ಮುಚ್ಚಿ ಕುಳಿತ ಉಡುಪಿ ಪೋಲಿಸ್ ಇಲಾಖೆ
ಉಡುಪಿ, ಡಿಸೆಂಬರ್ 01: ಉಡುಪಿಯಲ್ಲಿ ಮತ್ತೆ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಮರುಕಳಿಸಿದೆ. ಉಡುಪಿ ಜಿಲ್ಲೆಯ ಕಾಪುವಿನ ತೆಂಕಪೇಟೆಯಲ್ಲಿ ಈ ಘಟನೆ ಸಂಭವಿಸಿದೆ.
ಸ್ಥಳೀಯ ನಿವಾಸಿಯಾದ ಕುಮುದಾ ಪ್ರಭು ಅವರು ಮುಂಜಾನೆ 5 ಗಂಟೆ ಹೊತ್ತಿಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಖದೀಮರು ಕುಮುದಾ ಅವರನ್ನು ದೂಡಿಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಕಾಪು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇತ್ತಿಚಿನ ದಿನಗಳಲ್ಲಿ ಸತತ ಇಂತಹ ಪ್ರಕರಣಗಳು ಉಡುಪಿಯಲ್ಲಿ ನಡೆಯುತ್ತಿದೆ, ಆದರೂ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸದೆ ಕಣ್ಣು ಮುಚ್ಚಿ ಕುಳಿತ್ತಿದೆ ಸ್ಥಳೀಯರು ಆರೋಪಿಸಿದ್ದಾರೆ.
ಪೋಲಿಸ್ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
You must be logged in to post a comment Login