Connect with us

LATEST NEWS

ಶಾರ್ಟ್ ಸರ್ಕ್ಯೂಟ್ ಗೆ ಸುಟ್ಟು ಕರಕಲಾದ ಜಯದೇವ್ ಟು ವೀಲ್ಹರ್ ಶೊರೂಂ

ಶಾರ್ಟ್ ಸರ್ಕ್ಯೂಟ್ ಗೆ ಸುಟ್ಟು ಕರಕಲಾದ ಜಯದೇವ್ ಟು ವೀಲ್ಹರ್ ಶೊರೂಂ

ಉಡುಪಿ ಜೂನ್ 24 ಉಡುಪಿಯ ಜಯದೇವ ಟು ವೀಲ್ಹರ್ ಶೊರೂಂ ನಲ್ಲಿ ಬೆಂಕಿ ಅವಘಡ ಸಂಭ‌ವಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಉಡುಪಿ ನಗರದ ಇಂದ್ರಾಳ ಪೆಟ್ರೋಲ್ ಬಂಕ್ ಬಳಿ ಇರುವ ಜಯದೇವ ಟು ವೀಲರ್ ಶೋರೂಂನಲ್ಲಿ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹಬ್ಬಿದ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಕಿಯ ತೀವ್ರತೆಗೆ ಇಡೀ ಶೋ ರೂಂ ಸುಟ್ಟು ಕರಕಲಾಗಿದೆ.

ಶೋ ರೂಂ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇರುವ ಹಿನ್ನಲೆ ಬೆಂಕಿ ನಿಯಂತ್ರಣಕ್ಕೆ ಮೂರು ಅಗ್ನಿಶಾಮಕದಳ ಹರಸಾಹಸ ಪಡಬೇಕಾಯಯಿತು. ಅಲ್ಲದೆ ಶೋ ರೂಂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಅಗ್ನಿಶಾಮಕ ದಳದ ಸತತ ಕಾರ್ಯಾಚರಣೆ ಯಿಂದ ಬೆಂಕಿ ನಂದಿಸಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ ನೂರಾರು ಜನರು ಸೇರಿದ್ದರು, ಹೆಚ್ಚಿನ ಅವಘಡ ಸಂಭವಿಸಿದಂತೆ ಪ್ರದೇಶದಲ್ಲಿ ಕರೆಂಟ್ ಕಟ್ ಮಾಡಲಾಗಿತ್ತು.

VIDEO

Facebook Comments

comments