Connect with us

FILM

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ನವ್ಯಾ ನಾಯರ್ ಹೆಸರು..IRS ಅಧಿಕಾರಿ ಗಿಫ್ಟ್ ತಂದಿಟ್ಟ ಸಂಕಷ್ಟ…!!

ಮುಂಬೈ ಅಗಸ್ಟ್ 31 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ಸಚಿನ್ ಸಾವಂತ್ ಅವರಿಂದ ನಟಿ ನವ್ಯಾ ನಾಯರ್ ಆಭರಣ ಪಡೆದಿರುವುದನ್ನು ಜಾರಿ ನಿರ್ದೇಶನಾಲಯ (ED) ಪತ್ತೆ ಮಾಡಿದೆ.


ನಿನ್ನೆ ಇಡಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿಯೂ ಸಚಿನ್ ಕೊಚ್ಚಿಗೆ ನವ್ಯಾ ಅವರನ್ನು ನೋಡಲು ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. ಸಚಿನ್ ಸಾವಂತ್ ಲಕ್ನೋದಲ್ಲಿ ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿದ್ದಾಗ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೂನ್‌ನಲ್ಲಿ ಇಡಿ ಅವರನ್ನು ಬಂಧಿಸಿತ್ತು. ಇದಕ್ಕೂ ಮುನ್ನ ಮುಂಬೈನಲ್ಲಿ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕರಾಗಿದ್ದಾಗ ಸಚಿನ್ ಸಾವಂತ್ ಅವರು ತಮ್ಮ ಆದಾಯ ಮೀರಿ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ.


ತನಿಖೆ ವೇಳೆ ಬೇನಾಮಿ ಆಸ್ತಿ ಹಾಗೂ ಆತ ಶಾಮೀಲಾಗಿದ್ದ ಕಂಪನಿಗಳು ಪತ್ತೆಯಾಗಿವೆ. ನಿಖರವಾದ ಮೂಲವನ್ನು ತೋರಿಸದೆ 1.25 ಕೋಟಿ ರೂಪಾಯಿ ಬ್ಯಾಂಕ್ ಠೇವಣಿ ಇದೆ ಎಂದು ಇಡಿ ಆರೋಪಿಸಿದೆ. ವಾಟ್ಸಾಪ್ ಚಾಟ್ ಮೇಲೆ ಕೇಂದ್ರೀಕರಿಸಿದ ತನಿಖೆಯಲ್ಲಿ ನವ್ಯಾ ನಾಯರ್ ಜೊತೆಗಿನ ಸ್ನೇಹವನ್ನು ತನಿಖಾ ಸಂಸ್ಥೆ ಪತ್ತೆ ಮಾಡಿದೆ. ಐಆರ್‌ಎಸ್ ಅಧಿಕಾರಿ ಸಚಿನ್ ಸಾವಂತ್ ಹಾಗೂ ನಟಿ ನವ್ಯಾ ನಾಯರ್ ರೆಸಿಡೆನ್ಶಿಯಲ್ ಸೊಸೈಟಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ತಾವು ಸ್ನೇಹಿತರಾಗಿದ್ದು, ಸ್ನೇಹದ ಹೆಸರಿನಲ್ಲಿ ನೀಡಿದ ಉಡುಗೊರೆಗಳನ್ನು ಸ್ವೀಕರಿಸುವುದನ್ನು ಬಿಟ್ಟು ಬೇರೆ ಯಾವುದರಲ್ಲೂ ಭಾಗಿಯಾಗಿಲ್ಲ ಎಂದು ನವ್ಯಾ ನಾಯರ್ ಇಡಿಗೆ ತಿಳಿಸಿದ್ದಾರೆ.


ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಲು ಹಲವು ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಸಚಿನ್ ತಮ್ಮ ಹುಟ್ಟುಹಬ್ಬದಂದು ನವ್ಯಾ ಮಗನಿಗೆ ಉಡುಗೊರೆ ನೀಡಿದ್ದಾರೆ. ಆದರೆ, ನವ್ಯಾಗೆ ಯಾವುದೇ ಉಡುಗೊರೆ ನೀಡಿಲ್ಲ. ಈ ಎಲ್ಲಾ ವಿಷಯಗಳನ್ನು ಇಡಿಗೆ ತಿಳಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *