FILM
ಮುರಿದ ಮದುವೆ ಆಧ್ಯಾತ್ಮದ ಕಡೆ ವಾಲಿದ ಬಿಗ್ ಬಾಸ್ ನ ಮಾಜಿ ಸ್ಪರ್ಧಿ

ಬೆಂಗಳೂರು : ಮದುವೆ ವಿಚಾರದಲ್ಲಿ ಕೋಲಾಹಲ ಸೃಷ್ಠಿಸಿದ್ದ ಬಿಗ್‍ಬಾಸ್ ಸೀಸನ್-7ರ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಈಗ ದಿಢೀರ್ ಅಂತ ಅಧ್ಯಾತ್ಮಿಕದ ಕಡೆ ವಾಲಿದ್ದು, ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
ಓಶೋ ಧ್ಯಾನ ಮಂದಿರಕ್ಕೆ ಸೇರಿಕೊಂಡಿರುವ ಚೈತ್ರಾ ಕೊಟೂರುಗೆ ಅಲ್ಲಿನ ಗುರುಗಳು ಮಾ ಪ್ರಗ್ಯಾ ಭಾರತಿ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಈ ಕುರಿತಂತೆ ಫೋಟೋವೊಂದನ್ನು ಚೈತ್ರಾ ಕೊಟೂರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಚೈತ್ರಾ ಅವರು ಸ್ವಾಮಿ ಗೋಪಾಲ ಭಾರತಿ ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದು ಅದಕ್ಕೆ ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಚೈತ್ರಾ ಕೊಟ್ಟೂರು ಗೆಳೆಯ ನಾಗಾರ್ಜುನ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲ ಗಂಟೆಗಳಲ್ಲಿ ಎರಡು ಕುಟುಂಬದವರ ನಡುವೆ ದೊಡ್ಡ ಜಟಾಪಟಿ ಶುರುವಾಗಿತ್ತು. ಅಲ್ಲದೆ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು.