LATEST NEWS
ಬುಲೆಟ್ ನಿಂದ ಜೀವ ಉಳಿಸಿದ ಶಿಲುಬೆ ಹಾರ..!

ಅರ್ಜೆಂಟೀನಾ, ಜನವರಿ 09: ಆಯಸ್ಸು ಗಟ್ಟಿಯಾಗಿದ್ರೆ ಬಂಡೆ ಬಂದು ಬಿದ್ರು ಸಾಯುದಿಲ್ಲ ಅನ್ನೋ ಮಾತಿಗೆ ಸಾಕ್ಷಿ ಈ ಘಟನೆ, ಗಾಳಿಯಿಂದ ಹಾರಿಬಂದ ಗುಂಡು ಬಾಲಕನ ಎದೆಯನ್ನ ಇನ್ನೇನು ಸೀಳಿತು ಅನ್ನೋವಷ್ಟರಲ್ಲಿ ಆತನ ಕುತ್ತಿಗೆಯಲ್ಲಿದ್ದ ಸರದ ಏಸುವಿನ ಶಿಲುಬೆಗೆ ಬಡಿದ ಪರಿಣಾಮ ಬಾಲಕ ಬಚಾವಾದ ಪವಾಡಸದೃಶ ಘಟನೆ ಅರ್ಜೆಂಟೀನಾದಲ್ಲಿ ವರದಿಯಾಗಿದೆ.
ಟಿಜಿಯಾನೋ ಎಂಬ ಬಾಲಕ ಡಿಸೆಂಬರ್ 31ರ ರಾತ್ರಿ 10 ಗಂಟೆ ಸುಮಾರಿಗೆ ಅರ್ಜೆಂಟೀನಾ ಪ್ರಾಂತ್ಯದ ಟುಕುಮಾನ್ನ ಲಾಸ್ ತಾಲಿಟಾಸ್ನಲ್ಲಿ ತನ್ನ ಸೋದರರೊಂದಿಗೆ ಮನೆಯ ಹೊರಗಡೆ ಆಟವಾಡುತ್ತಿದ್ದಾಗ ದಿಕ್ಕು ತಪ್ಪಿ ಬಂದ ಗುಂಡೊಂದು ಬಾಲಕನ ಎದೆಗೆ ಬಡಿದಿದೆ.

[MILAGRO DE AÑO NUEVO] Anoche minutos antes de la 00 una bala perdida le pegó en el pecho a un Niño en Las Talitas. Pero el impacto fue en un crucifijo que el menor llevaba puesto, lo que salvó su vida. El Cristo quedó intacto y el Niño con una herida por el roce@telefetucuman pic.twitter.com/N0vfFPtE8U
— José Romero Silva (@Josecitors) January 2, 2021
ಎದೆಯಲ್ಲಿ ತೀವ್ರವಾದ ನೋವು ಅನುಭವಿಸಿದ ಬಾಲಕ ಪಕ್ಕದಲ್ಲೇ ಬುಲೆಟ್ ಬಿದ್ದಿರೋದನ್ನ ಗಮನಿಸಿದ್ದಾನೆ. ಕೂಡಲೇ ಆತನನ್ನ ಆಸ್ಪತ್ರೆಗೆ ದಾಖಲಿಸಲಾಯ್ತು. ಈ ವೇಳೆ ವೈದ್ಯರು ಆತನ ಎದೆಗೆ ಗುಂಡು ತಾಕಿದೆ ಎಂದು ಹೇಳಿದ್ದಾರೆ. ಬಾಲಕ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ಆತನ ಚಿಕ್ಕಮ್ಮ ಶಿಲುಬೆ ಹಾರದ ಮಧ್ಯದಲ್ಲಿ ರಂಧ್ರ ಇರೋದನ್ನ ಕಂಡುಕೊಂಡರು. ಈ ಶಿಲುಬೆಯ ಹಾರವನ್ನ ಬಾಲಕನ ತಂದೆ ಆತನಿಗೆ ಉಡುಗೊರೆ ರೂಪದಲ್ಲಿ ನೀಡಿದ್ರು. ಶಿಲುಬೆ ಬಾಲಕನ ಜೀವ ಉಳಿಸಿದ್ದು ಇದು 2021ರ ಪವಾಡ ಅಂತಾ ಎಲ್ಲರೂ ಮಾತನಾಡಿಕೊಂಡಿದ್ದಾರೆ.