Connect with us

    LATEST NEWS

    ಬುಲೆಟ್ ನಿಂದ ಜೀವ ಉಳಿಸಿದ ಶಿಲುಬೆ ಹಾರ..!

    ಅರ್ಜೆಂಟೀನಾ, ಜನವರಿ 09: ಆಯಸ್ಸು ಗಟ್ಟಿಯಾಗಿದ್ರೆ ಬಂಡೆ ಬಂದು ಬಿದ್ರು ಸಾಯುದಿಲ್ಲ ಅನ್ನೋ ಮಾತಿಗೆ ಸಾಕ್ಷಿ ಈ ಘಟನೆ, ಗಾಳಿಯಿಂದ ಹಾರಿಬಂದ ಗುಂಡು ಬಾಲಕನ ಎದೆಯನ್ನ ಇನ್ನೇನು ಸೀಳಿತು ಅನ್ನೋವಷ್ಟರಲ್ಲಿ ಆತನ ಕುತ್ತಿಗೆಯಲ್ಲಿದ್ದ ಸರದ ಏಸುವಿನ ಶಿಲುಬೆಗೆ ಬಡಿದ ಪರಿಣಾಮ ಬಾಲಕ ಬಚಾವಾದ ಪವಾಡಸದೃಶ ಘಟನೆ ಅರ್ಜೆಂಟೀನಾದಲ್ಲಿ ವರದಿಯಾಗಿದೆ.

    ಟಿಜಿಯಾನೋ ಎಂಬ ಬಾಲಕ ಡಿಸೆಂಬರ್ 31ರ ರಾತ್ರಿ 10 ಗಂಟೆ ಸುಮಾರಿಗೆ ಅರ್ಜೆಂಟೀನಾ ಪ್ರಾಂತ್ಯದ ಟುಕುಮಾನ್​​ನ ಲಾಸ್​ ತಾಲಿಟಾಸ್​ನಲ್ಲಿ ತನ್ನ ಸೋದರರೊಂದಿಗೆ ಮನೆಯ ಹೊರಗಡೆ ಆಟವಾಡುತ್ತಿದ್ದಾಗ ದಿಕ್ಕು ತಪ್ಪಿ ಬಂದ ಗುಂಡೊಂದು ಬಾಲಕನ ಎದೆಗೆ ಬಡಿದಿದೆ.

    ಎದೆಯಲ್ಲಿ ತೀವ್ರವಾದ ನೋವು ಅನುಭವಿಸಿದ ಬಾಲಕ ಪಕ್ಕದಲ್ಲೇ ಬುಲೆಟ್​ ಬಿದ್ದಿರೋದನ್ನ ಗಮನಿಸಿದ್ದಾನೆ. ಕೂಡಲೇ ಆತನನ್ನ ಆಸ್ಪತ್ರೆಗೆ ದಾಖಲಿಸಲಾಯ್ತು. ಈ ವೇಳೆ ವೈದ್ಯರು ಆತನ ಎದೆಗೆ ಗುಂಡು ತಾಕಿದೆ ಎಂದು ಹೇಳಿದ್ದಾರೆ. ಬಾಲಕ ಡಿಸ್ಚಾರ್ಜ್​ ಆಗಿ ಮನೆಗೆ ಮರಳಿದ ಬಳಿಕ ಆತನ ಚಿಕ್ಕಮ್ಮ ಶಿಲುಬೆ ಹಾರದ ಮಧ್ಯದಲ್ಲಿ ರಂಧ್ರ ಇರೋದನ್ನ ಕಂಡುಕೊಂಡರು. ಈ ಶಿಲುಬೆಯ ಹಾರವನ್ನ ಬಾಲಕನ ತಂದೆ ಆತನಿಗೆ ಉಡುಗೊರೆ ರೂಪದಲ್ಲಿ ನೀಡಿದ್ರು. ಶಿಲುಬೆ ಬಾಲಕನ ಜೀವ ಉಳಿಸಿದ್ದು ಇದು 2021ರ ಪವಾಡ ಅಂತಾ ಎಲ್ಲರೂ ಮಾತನಾಡಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply