Connect with us

LATEST NEWS

ಬೈಂದೂರು – ಮೀನು ಸಾಗಿಸುವ ವಾಹನದಲ್ಲಿ ಜಾನುವಾರ ಸಾಗಾಟ

ಬೈಂದೂರು ನವೆಂಬರ್ 16: ಮೀನು ಸಾಗಿಸುವ ಮಿನಿ ಇನ್ಸುಲೇಟರ್ ವಾಹನದಲ್ಲಿ ಇದೀಗ ದನಗಳ್ಳರು ದನಗಳನ್ನು ಸಾಗಿಸುವ ಕಾರ್ಯ ಆರಂಭಿಸಿದ್ದಾರೆ. ಇಂತಹ ಪ್ರಕರವೊಂದು ಶಿರೂರಿನಲ್ಲಿ ನಡೆದಿದ್ದು, ಮೀನು ಸಾಗಿಸುವ ಇನ್ಸುಲೇಟರ್‌ ವಾಹನ ಪಲ್ಟಿಯಾದ ಘಟನೆ ಶಿರೂರು ಕರಿಕಟ್ಟೆ ಬಳಿ ಸಂಭವಿಸಿದೆ.


ಆದರೆ ಇದರಲ್ಲಿ ಮೀನಿನ ಬದಲು ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಗುರುವಾರ ರಾತ್ರಿ ಮಿನಿ ಇನ್ಸುಲೇಟರ್‌ ವಾಹನದೊಳಗೆ ಮೀನು ತುಂಬಿರುವ ಟ್ರೇ ಗಳನ್ನು ಇರಿಸಿಕೊಂಡು ಮದ್ಯದಲ್ಲಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ವಾಹನವು ಭಟ್ಕಳದಿಂದ ಬೈಂದೂರು ಕಡೆಗೆ ಸಾಗುತ್ತಿದ್ದಾಗ ಕರಿಕಟ್ಟೆ ದುರ್ಗಾಂಬಿಕಾ ಹಾಲ್‌ ಹತ್ತಿರ ಪಲ್ಟಿಯಾಗಿದೆ. ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *