LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯನಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯನಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿ
ಮಂಗಳೂರು ಜನವರಿ 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್ ಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ನಂತರ ಬೆಂಗಳೂರಿಗೆ ತೆರಳಿ ಪೊಲೀಸರಿಗೆ ಆರೋಪಿ ಆದಿತ್ಯ ಶರಣಾಗಿದ್ದ, ನಂತರ ಮಂಗಳೂರು ಪೊಲೀಸರು ಬೆಂಗಳೂರಿನಿಂದ ನಿನ್ನೆ ರಾತ್ರಿ ಕರೆತಂದಿದ್ದರು. ಆರೋಪಿಯನ್ನು ತೀವ್ರ ವಿಚಾರಣೆ ನಂತರ ಇಂದು ಮಂಗಳೂರಿನ ಪ್ರಥಮ ದರ್ಜೆ 6 ನೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಿಚಾರಣೆಗಾಗಿ 15 ದಿನ ವಶಕ್ಕೆ ನೀಡಲು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಆರೋಪಿ ನ್ಯಾಯಾಲಯದಲ್ಲಿ ತಲೆ ತಗ್ಗಿಸಿಕೊಂಡೇ ಇದ್ದ , ನ್ಯಾಯಾಧೀಶರ ಮುಂದೆ ಪಶ್ಚಾತ್ತಾಪದಿಂದ ನನ್ನಿಂದ ತಪ್ಪಾಯ್ತು ಎಂದು ತಿಳಿಸಿದ ಆರೋಪಿ ಆದಿತ್ಯ, ನ್ಯಾಯಾಧೀಶರು ಪೊಲೀಸರಿಂದ ನಿನಗೆ ತೊಂದರೆ ಆಯ್ತಾ ಎಂದು ಪ್ರಶ್ನೆಗೆ ಇಲ್ಲ ಎಂದು ತಲೆಯಾಡಿಸಿದ್ದಾನೆ. ನಿನ್ನ ಪರ ವಾದ ಮಾಡಲು ವಕೀಲರು ಇದಾರಾ ಎಂಬ ಪ್ರಶ್ನೆಗೆ ಯಾರೂ ವಕೀಲರು ಇಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೆ ನಿನಗೆ ಆರೋಗ್ಯ ಸಮಸ್ಯೆ ಇದೆಯಾ ಎಂದು ಕೇಳಿದ್ದಕ್ಕೂ ಆಗಲೂ ಏನೂ ಸಮಸ್ಯೆ ಇಲ್ಲ ಅಂತ ಉತ್ತರಿಸಿದ್ದಾನೆ.
ಬಾಂಬ್ ತಯಾರಿಸಲು ಕಚ್ಚಾ ವಸ್ತುಗಳನ್ನು ಚೆನೈ ನಿಂದ ತರಿಸಿರುವ ಹಿನ್ನಲೆ ಬಾಂಬರ್ ಆದಿತ್ಯ ರಾವ್ ಚೆನ್ನೈಗೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಿಯನ್ನು 15 ದಿನಗಳ ಕಾಲ ಕಸ್ಟಡಿಗೆ ಕೋರ್ಟ್ ಮುಂದೆ ಪೊಲೀಸರು ಮನವಿ ಸಲ್ಲಿಸಿದ್ದರು. 10 ದಿನ ಪೊಲೀಸ್ ಕಸ್ಟಡಿ ನೀಡಿರುವ ನ್ಯಾಯಾಧೀಶರು 10 ದಿನದೊಳಗೆ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ್ದಾರೆ.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಧೀಶರಾದ ಕಿಶೋರ್ ಕುಮಾರ್ ಕೆ.ಎನ್. 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಬಾಂಬರ್ ಆದಿತ್ಯ ರಾವ್ ಆರೋಗ್ಯ ಪರೀಕ್ಷೆ ಪೂರ್ಣಗೊಳಿಸಲಾಗಿತ್ತು, ವೆನ್ಲಾಕ್ ಆಸ್ಪತ್ರೆ ಯಿಂದ ಪಣಂಬೂರುACP ಕಚೇರಿಗೆ ಆದಿತ್ಯರಾವ್ ಶಿಫ್ಟ್ ಮಾಡಲಾಗಿದೆ. ಪಣಂಬೂರು ACP ಕಚೇಯಲ್ಲಿ ಮತ್ತೆ ಆರೋಪಿ ಆದಿತ್ಯರಾವ್ ನನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ನಂತರ ತನಿಖೆ ಸಂಪೂರ್ಣ ವರದಿಯನ್ನು ನಾಳೆ ರಾಜ್ಯ ಸರ್ಕಾರಕ್ಕೆ ಪೊಲೀಸರು ನೀಡಲಿದ್ದು, ನಾಳೆ ಸಂಜೆ ಕೇಂದ್ರ ಗೃಹಸಚಿವಾಯಲಕ್ಕೆ ರಾಜ್ಯ ಸರ್ಕಾರದ ವರದಿ ಸಲ್ಲಿಕೆ ಮಾಡಲಿದೆ.