BANTWAL
ಕೊರೊನಾದಿಂದ ಮೃತಪಟ್ಟ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಪರದಾಟ ಕೊನೆಗೂ ಬಿ ಸಿ ರೋಡ್ ನ ಕೈಕುಂಜೆಯಲ್ಲಿ ಅಂತ್ಯಕ್ರಿಯೆ
ಕೊರೊನಾದಿಂದ ಮೃತಪಟ್ಟ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಪರದಾಟ ಕೊನೆಗೂ ಬಿ ಸಿ ರೋಡ್ ನ ಕೈಕುಂಜೆಯಲ್ಲಿ ಅಂತ್ಯಕ್ರಿಯೆ
ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಗುರುವಾರ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ಪರದಾಡುವಂತಾಗಿ ಕೊನೆಗೆ ಬಿ ಸಿ ರೋಡ್ ನ ಕೈಕುಂಜೆಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಕೋವಿಡ್-19 ವೈರಸ್ ಕಾರಣದಿಂದ ಮೃತಪಟ್ಟ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಪೇಚಾಡಬೇಕಾದ ಪರಿಸ್ಥಿತಿ ನಡೆಯಿತು. ಈ ಮೊದಲು ಪಚ್ಚನಾಡಿಯ ಸ್ಮಶಾನದಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು ಆದರೆ ಸ್ಥಳೀಯರ ವಿರೋಧ ಹಾಗೂ ಶಾಸಕರ ವಿರೋಧದ ನಡುವೆ ಜಿಲ್ಲಾಡಳಿತಕ್ಕೆ ಶವಸಂಸ್ಕಾರ ನಡೆಸಲು ಆಗಿರಲಿಲ್ಲ, ಈ ನಡುವೆ ನಗರದ ಬೆರೆ ಸ್ಮಶಾನಗಳಲ್ಲೂ ಕೂಡ ಸ್ಥಳೀಯರು ಭಾರಿ ಸಂಖ್ಯೆಯಲ್ಲಿ ಸೇರಿ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ಮಹಿಳೆಯ ಶವ ಸಂಸ್ಕಾರವನ್ನು ಮೂಡುಶೆಡ್ಡೆಯ ಸ್ಮಶಾನದಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೂಡುಶೆಡ್ಡೆಯ ಸ್ಮಶಾನದ ಬಳಿಗೆ ಸ್ಥಳೀಯರು ಜಮಾಯಿಸಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶಾಸಕ ಉಮಾನಾಥ ಕೋಟ್ಯಾನ್ ಕೋವಿಡ್ -19 ಸೋಂಕಿತ ಮಹಿಳೆಯ ಶವ ಸಂಸ್ಕಾರದ ಬಗ್ಗೆ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಮೃತ ವ್ಯಕ್ತಿ ಬಂಟ್ವಾಳದವರು. ಬಂಟ್ವಾಳದಲ್ಲೇ ಶವಸಂಸ್ಕಾರವನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ಮೂಡುಶೆಡ್ಡೆಯಲ್ಲಿ ಶವಸಂಸ್ಕಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ಉಮಾನಾಥ್ ಕೊಟ್ಯಾನ್ ಸ್ಪಷ್ಟಪಡಿಸಿದ್ದಾರೆ.
ಮೃತ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಮಂಗಳೂರು ನಗರದ ಸ್ಮಶಾನಗಳಲ್ಲಿ ಜನರು ವಿರೋಧ ನಡೆಸಿದ್ದು, ನಂತರ ಸ್ಥಳೀಯರ ಭಾರೀ ವಿರೋಧದ ನಡುವೆಯೂ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬಿ.ಸಿ.ರೋಡ್ ರೈಲು ನಿಲ್ದಾಣದ ಬಳಿಯ ಕೈಕುಂಜೆ ಹಿಂದೂ ರುದ್ರ ಭೂಮಿಯಲ್ಲಿ ತಡ ರಾತ್ರಿ 2 ಗಂಟೆಯ ಸುಮಾರಿಗೆ ನಡೆಯಿತು.